Advertisement
ಏನಿದು ಕ್ರೂಸ್ ಟೂರಿಸಂ?ಬೃಹತ್ ವಿಲಾಸಿ ನೌಕೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ದು, ಅವರಿಗೆ ವಿಶೇಷ ಪ್ರವಾಸದ ಅನುಭವ ನೀಡುವುದನ್ನು ಕ್ರೂಸ್ ಪ್ರವಾಸೋದ್ಯಮ ಎನ್ನುತ್ತಾರೆ. ಇಂತಿಷ್ಟು ದರ ಪಾವತಿಸಿ ನೌಕೆಯಲ್ಲಿ ಪ್ರಯಾಣಿಸುವವರು, ಅಲ್ಲಿರುವ ಐಷಾರಾಮಿ ಸೌಲಭ್ಯಗಳನ್ನು ಬಳಸಿಕೊಂಡು ಮೋಜು-ಮಸ್ತಿ ಮಾಡಿ ವಾಪಸಾಗುತ್ತಾರೆ.
ನೌಕೆಯೊಳಗೆ ಸ್ಪಾ, ಸೆಲೂನ್, ಜಿಮ್, ಶಾಪಿಂಗ್ ಪ್ರದೇಶ, ರೆಸ್ಟೋರೆಂಟ್‌ಗಳು, ಬಾರ್‌ಗಳು, ಕ್ಯಾಸಿನೋ, ಥಿಯೇಟರ್, ಸ್ವಿಮ್ಮಿಂಗ್ ಪೂಲ್, ನೈಟ್‌ಕ್ಲಬ್, ಲಾಂಜ್, ಲೈವ್‌ಬ್ಯಾಂಡ್-ಡಿಜೆ, ಇಂಟರ್ನೆಟ್ ಕೆಫೆ, ಕಾರ್ಡ್ ರೂಂ, ಪುಸ್ತಕ ಓದಲೆಂದೇ ಪ್ರತ್ಯೇಕ ವಲಯ, ಮಕ್ಕಳ ಶೈಕ್ಷಣಿಕ ಹಾಗೂ ಆಟೋಟಗಳಿಗಾಗಿ ಪ್ರತ್ಯೇಕ ವಲಯ, ಜಾಗಿಂಗ್ ಟ್ರ್ಯಾಕ್, ಬಾಸ್ಕೆಟ್‌ಬಾಲ್- ವಾಲಿಬಾಲ್ – ಟೆನ್ನಿಸ್ ಕೋರ್ಟ್‌ಗಳು, ಸರ್ಫಿಂಗ್-ಸ್ಕೈ ಡೈವಿಂಗ್ ಸಿಮ್ಯುಲೇಟರ್‌ಗಳು ಇತ್ಯಾದಿ. ಮನೋರಂಜನೆ: ಹಾಡುಗಾರರು, ನೃತ್ಯಗಾರ್ತಿಯರು, ಹಾಸ್ಯಕಲಾವಿದರು, ಜಾದೂಗಾರರು ಮತ್ತಿತರರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
Related Articles
Advertisement
4 ವಿಧದ ಕೊಠಡಿಗಳುಇಂಟೀರಿಯರ್ – ಕಿಟಕಿಯಿರದ ಸಣ್ಣ ಕೊಠಡಿ.ಓಷಿಯನ್ ವ್ಯೂವ್ – ಸ್ವಲ್ಪ ದೊಡ್ಡದಾದ ಕೊಠಡಿ. ಹೊರಗಿನ ಸಮುದ್ರದ ವೀಕ್ಷಣೆಗೆಂದು ದೊಡ್ಡ ಕಿಟಕಿಯಿರುತ್ತದೆ.ಬಾಲ್ಕನಿ- ಮಧ್ಯಮ ಗಾತ್ರದ ಕೊಠಡಿ. ಪ್ರತ್ಯೇಕ ಬಾಲ್ಕನಿಯಿರುವ ಕಾರಣ ಹೊರಗೆ ನಿಂತು ವೀಕ್ಷಣೆ ಸಾಧ್ಯ.ಸೂಟ್ – ವಿಶಾಲವಾದ ಮನೆಯಂಥ ಪ್ರದೇಶ.ಪ್ರತ್ಯೇಕ ಲಿವಿಂಗ್ ರೂಂ, ಮಲಗುವ ಕೋಣೆ ಹಾಗೂ ಇತರ ಸೌಲಭ್ಯಗಳಿರುತ್ತವೆ. ದರ ಎಷ್ಟು?
ದರವು ನಿರ್ದಿಷ್ಟ ಕ್ರೂಸ್ ನೌಕೆಯ ಮೇಲೆ ಹಾಗೂ ಅಲ್ಲಿ ಎಷ್ಟು ದಿನ ತಂಗುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ದಿನಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ 4,000 ರೂ.ಗಳಿಂದ 12 ಸಾವಿರ ರೂ.ಗಳವರೆಗೆ ಇರುತ್ತದೆ. ಇತ್ತೀಚೆಗೆ ಎನ್‌ಸಿಬಿ ದಾಳಿಗೆ ಒಳಗಾದ ಕ್ರೂಸ್ ನೌಕೆಯಲ್ಲಿ ಎರಡು ರಾತ್ರಿಗೆ (ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳು) 40 ಸಾವಿರ ರೂ. ದರ ವಿಧಿಸಲಾಗಿತ್ತು. ದೀರ್ಘಾವಧಿ ತಂಗುವುದಿದ್ದರೆ 5 ಲಕ್ಷ ರೂ.ಗಳವರೆಗೆ ಪಾವತಿಸಬೇಕಾಗುತ್ತದೆ.