Advertisement
ಈಗಾಗಲೇ 2015ರ ನಂತರ ಇದೇ ಮೊದಲ ಬಾರಿಗೆ ತೈಲ ಬೆಲೆ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಹೆಚ್ಚಾಗಿದೆ.ಒಪೆಕ್ ದೇಶಗಳು ತೈಲ ಪೂರೈಕೆಯನ್ನು ನಿಯಂತ್ರಿಸಿದ್ದು, ಬೆಲೆ ಏರಿಕೆ ಕಂಡಿದೆ.ಇನ್ನೊಂದೆಡೆ ಸೌದಿ ಅರೇಬಿಯಾದಲ್ಲಿ ಉಂಟಾಗುತ್ತಿರುವ ರಾಜಕೀಯ ವೈಪರೀತ್ಯಗಳು ತೈಲ ಬೇಡಿಕೆಯ ಮೇಲೆ ಪ್ರಭಾವ ಬೀರಿದೆ. ಇದೇ ಆಧಾರದಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿದ್ದು, ಇಳಿಕೆ ಮುನ್ಸೂಚನೆ ಆಧಾರದಲ್ಲಿ ವಹಿವಾಟು ನಡೆಸುವ ಮೊತ್ತ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ಪ್ರಮಾಣದಲ್ಲಿ ತೈಲ ದರ ಏರಿಕೆಯಾದರೆ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೆಚ್ಚಳವಾಗಲಿದ್ದು, ಇದರಿಂದ ಕೇಂದ್ರ ಸರ ಕಾ ರದ ಮೇಲೆ ಒತ್ತಡ ಉಂಟಾಗಲಿದೆ.