Advertisement

ಕಾಶ್ಮೀರ: ಇನ್ನು ಪ್ಲಾಸ್ಟಿಕ್‌ ಬುಲೆಟ್‌

06:00 AM Oct 08, 2017 | Team Udayavani |

ಮೀರತ್‌: ಜಮ್ಮು-ಕಾಶ್ಮೀರದಲ್ಲಿ ಪೆಲ್ಲೆಟ್‌ ಗನ್‌ಗಳ ಬಳಕೆಯಿಂದ ಉಂಟಾಗುತ್ತಿರುವ ಅಪಾಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ನಂತರದಲ್ಲಿ ಪ್ಲಾಸ್ಟಿಕ್‌ ಬುಲೆಟ್‌ಗಳನ್ನು ಬಳಸಲು ನಿರ್ಧರಿಸಿದ್ದ ಸಿಆರ್‌ಪಿಎಫ್ ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಹೊಸದಾಗಿ ಅಭಿವೃದ್ಧಿಗೊಳಿಸಿದ 21 ಸಾವಿರ ಸುತ್ತು ಪ್ಲಾಸ್ಟಿಕ್‌ ಬುಲೆಟ್‌ಗಳನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿದೆ.

Advertisement

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ಬುಲೆಟ್‌ಗಳನ್ನು ಪುಣೆಯಲ್ಲಿನ ಆರ್ಡಿನನ್ಸ್‌ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗಿದೆ. ಇದನ್ನು ಎಕೆ 56 ಹಾಗೂ 47 ಸರಣಿಯ ಗನ್‌ಗಳಲ್ಲಿ ಬಳಸಬಹುದಾಗಿದೆ. ಈ ಬುಲೆಟ್‌ಗಳು ಪೆಲೆಟ್‌ಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಉದ್ರಿಕ್ತರನ್ನು ಚದುರಿಸಲು ಹಾಗೂ ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಈ ಪ್ಲಾಸ್ಟಿಕ್‌ ಬುಲೆಟ್‌ಗಳನ್ನು ಬಳಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕಲ್ಲು ತೂರಾಟಗಾರರ ಮೇಲೆ ಪೆಲೆಟ್‌ ಗನ್‌ಗಳನ್ನು ಬಳಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು. ಪೆಲೆಟ್‌ಗಳಿಂದಾಗಿ ಅಮಾಯಕರು ಕಣ್ಣು ಕಳೆದುಕೊಂಡಿರುವ ಘಟನೆಗಳು ವರದಿಯಾಗಿತ್ತು. ಹೀಗಾಗಿ ಪರ್ಯಾಯ ವಿಧಾನಗಳಾದ ಪ್ಲಾಸ್ಟಿಕ್‌ ಬುಲೆಟ್‌ಗಳು ಮತ್ತು ಮೆಣಸಿನ ಪುಡಿ ಆಧರಿತ ಪಾವಾ ಶೆಲ್‌ಗ‌ಳನ್ನು ಬಳಸಲು ಕೇಂದ್ರ ಸರ್ಕಾರ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next