Advertisement
ಕುಂದೂರು ಸೇರಿದಂತೆ ಮೂಡಿಗೆರೆ,ಮಂಗಳೂರು, ಚಿಕ್ಕಮಗಳೂರು,ಅರೇಹಳ್ಳಿ.ಸಕಲೇಶಪುರ, ಹಾಸನ ಮತ್ತಿತರ ಕಡೆಯಿಂದ ಬಂಧುಗಳು,ಸಾರ್ವಜನಿಕರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.ಮಧ್ಯಾಹ್ನ 1ಗಂಟೆಯಿಂದ 3.30 ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ತಾರಾದೇವಿ, ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್,ಬಿಜೆಪಿ ಮುಖಂಡ ಕೆ.ಸಿ.ರತನ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್ ಜಯರಾಮ್ ಗೌಡ,ಟಿ.ಎಂ. ಸುಬ್ರಹ್ಮಣ್ಯ,ಹರ್ಷ ಮೆಲ್ವಿನ್ ಲಸ್ರಾದೊ, ನಜರೆತ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾಲೋಬೊ,ಚಿಕ್ಕಮಗಳೂರು ಕ್ರೈಸ್ತ ಧರ್ಮಾಧ್ಯಕ್ಷ ಡಾ.ಅಂತೋನಿ ಸ್ವಾಮಿ ನೇತೃತ್ವದಲ್ಲಿ ಧರ್ಮಗುರು ಪ್ರೇಮ್ ಲಾರೆನ್ಸ್ ಡಿಸೋಜ, ಫಾ.ಥಾಮಸ್ ಕಲಘಟಗಿ, ಫಾ.ಎಲಿಯಾಸ್,ಫಾ.ಅಂತೋನಿ ವಾಸ್,ಜೆ.ಬಿ.ಗೊನ್ಸಾಲ್ವಿಸ್ ಸೇರಿದಂತೆ ವಿವಿಧ ಧರ್ಮಗುರುಗಳು ಬಲಿ ಪೂಜೆ ಅರ್ಪಿಸಿದರು.
Related Articles
Advertisement
ಸಮಾಜಕ್ಕೆ ನಾರ್ಬಟ್ ಸಲ್ಡಾನ ಆಸ್ತಿಯಾಗಿದ್ದರು.ಅವರ ಅಕಾಲಿಕ ಮರಣ ಸಮಾಜಕ್ಕೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ದಯಾಪಾಲಿಸಲಿ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ನಾರ್ಬರ್ಟ್ ಸಲ್ಡಾನರು ಜನರಿಗೆ ತೋರಿದ ಪ್ರೀತಿ ಈ ಲೋಕದಲ್ಲಿ ಹೇಗಿತ್ತು ಎನ್ನುವುದು ಜನಸಾಗರವೇ ಸಾರಿ ಹೇಳುತ್ತಿದೆ.ಸಾವಿನಿಂದ ನಮ್ಮ ಜೀವನ ಅಂತ್ಯವಾಗಲ್ಲ.ಪುನರುತ್ಥಾನವಾಗುತ್ತದೆ.ಏಸು ತೋರಿದ ದಾರಿಯನ್ನು ಇವರು ಅನುಸರಿಸಿ ನಮ್ಮಲ್ಲಿ ಅಮರರಾಗಿದ್ದಾರೆ ಎಂದು ಫಾ.ಎಲಿಯಾಸ್ ಸಿಕ್ವೇರಾ ಹೇಳಿದರು.