Advertisement

ಕಾಗೆಯ ದ್ವೇಷ 2 ವರ್ಷ ! ಅಧ್ಯಯನವೊಂದರಿಂದ ಈ ಅಂಶ ಬಹಿರಂಗ

12:05 PM Jul 01, 2020 | sudhir |

ಹೊಸದಿಲ್ಲಿ: ಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ದ್ವೇಷ ನೂರು ವರ್ಷ ಎಂಬ ನಟ ವಿಷ್ಣುವರ್ಧನ್‌ ಅವರ ಹಾಡು ಕೇಳಿರಬಹುದು… ಈ ಹಾಡು ಕೇಳಿದ ಮೇಲೆ ಹಾವು ಕೂಡ 12 ವರ್ಷ ದ್ವೇಷ ಸಾಧಿಸುತ್ತಾ ಎಂಬ ಪ್ರಶ್ನೆ ಮೂಡಿರಬಹುದು. ಆದರೆ, ಇಲ್ಲೊಂದು ವಿಚಿತ್ರ ಸಂಗತಿ ಹೊರಬಿದ್ದಿದೆ. ಅದೇನೆ‌ಂದರೆ, ಕಾಗೆ ಕೂಡ ದ್ವೇಷ ಸಾಧಿಸುತ್ತದೆಯಂತೆ…!

Advertisement

ಹೌದು, ಸಂಶೋಧಕರ ತಂಡವೊಂದು ಈ ಬಗ್ಗೆ ಸಾಬೀತು ಮಾಡಿದೆ. ಹಾಗೆಯೇ, 2011ರಲ್ಲಿ ಹೊರ­ಬಂದಿದ್ದ ಅಧ್ಯಯನವೊಂದು, ಕಾಗೆಗಳು ಮನುಷ್ಯರ ಮುಖಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತವೆ ಎಂದು ಹೇಳಿತ್ತು. ಆದರೆ, ಅದಕ್ಕಿಂತ ವಿಚಿತ್ರವಾದ ಅಂಶ ಈಗ ಬಯಲಾಗಿದ್ದು, ಅವು ಮುಖ ಗುರುತಿಟ್ಟುಕೊಳ್ಳುವುದಷ್ಟೇ ಅಲ್ಲ, ಏನಾದರೂ ತಪ್ಪು ಮಾಡಿದ್ದಲ್ಲಿ ದ್ವೇಷವನ್ನೂ ಕಾರುತ್ತವೆ ಎಂಬುದು ಬಹಿರಂಗವಾಗಿದೆ. ಜತೆಗೆ, ಈ ದ್ವೇಷದ ಬಗ್ಗೆ ತನ್ನ ಕುಟುಂಬ ಸದಸ್ಯರಿಗೂ ಕಾಗೆಗಳು ಹೇಳುತ್ತವೆಯಂತೆ. ಈ ಬಗ್ಗೆ ಎರಡು ವರ್ಷದವರೆಗೆ ಇದೇ ರೀತಿ ದ್ವೇಷ ಕಾರುತ್ತಲೇ ಇರುತ್ತವೆ ಎಂದೂ ಈ ಸಂಶೋಧನೆ ಹೇಳಿದೆ.

ಪತ್ತೆ ಮಾಡಿದ್ದು ಹೇಗೆ?: ಸ್ವೀಡನ್‌ನ ಲಾಂಡ್‌ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವೊಂದು ಕೆಲವು ಕಾಗೆಗಳನ್ನು ಆರಿಸಿ ತಂದು ಇವುಗಳನ್ನು ಇರಿಸಿಕೊಂಡು ಅಧ್ಯಯನ ನಡೆಸಿತು. ಈ ತಂಡವು ಮೃದು ಮತ್ತು ಒರಟು ಸ್ವಭಾವದ ತರಬೇತಿದಾರರನ್ನು ಪ್ರತ್ಯೇಕಿಸಿ ಇವರ ಕಡೆಯಿಂದ ಕಾಗೆಗಳಿಗೆ ಆಹಾರ ನೀಡಿಸಲಾಯಿತು. ಮೊದಲನೇ ಬಾರಿಗೆ ಈ ಎರಡೂ ಸ್ವಭಾವದವರಿಂದ ಆಹಾರ ಪಡೆದ ಕಾಗೆಗಳು, ಮಗದೊಮ್ಮೆ ಕೇವಲ ಮೃದು ಸ್ವಭಾವದ ತರಬೇತುದಾರರ ಕಡೆಯಿಂದ ಆಹಾರ ಪಡೆದವು. ಒರಟು ಸ್ವಭಾವದವರ ಬಳಿ ಹೋಗಲೇ ಇಲ್ಲ. ಈ ರೀತಿ ಎರಡು ವರ್ಷಗಳ ವರೆಗೆ ಮುಖ ಗುರುತಿಸಿಟ್ಟುಕೊಳ್ಳುತ್ತವೆ ಎಂದು ಈ ತಂಡ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next