Advertisement

ಹರಿಯಾಣ,ರಾಜಸ್ಥಾನದಲ್ಲಿ ಕೈಗೆ ಕ್ರಾಸ್‌ ವೋಟಿಂಗ್‌ ಶಾಕ್‌? 10ರಂದು ಚುನಾವಣೆ, ಅಂದೇ ಫ‌ಲಿತಾಂಶ

12:45 AM Jun 01, 2022 | Team Udayavani |

ಹೊಸದಿಲ್ಲಿ: ಭಾರೀ ಕುತೂಹಲ ಕೆರಳಿಸಿರುವ ರಾಜ್ಯಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಅವಧಿ ಪೂರ್ಣಗೊಂಡಿದ್ದು, ಹೆಚ್ಚು ಕಡಿಮೆ ಕಣ ಸಿದ್ಧವಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ರಾಜಸ್ಥಾನದಿಂದ ಮಾಧ್ಯಮ ದೊರೆ ಸುಭಾಷ್‌ ಚಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಇವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ. ಹಾಗೆಯೇ, ಹರಿಯಾಣದಲ್ಲೂ ಕಾರ್ತಿಕೇಯ ಶರ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್‌ಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Advertisement

ಈ ಚುನಾವಣೆಯಲ್ಲಿ ಬಿಜೆಪಿ, ವಿವಿಧ ರಾಜ್ಯಗಳಲ್ಲಿ ಒಟ್ಟು 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ಅಂದರೆ ರಾಜಸ್ಥಾನ ಮತ್ತು ಹರಿಯಾಣದಲ್ಲಿ ತಲಾ ಒಬ್ಬ ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿ ಬೆಂಬಲ ಪಡೆಯಲಿದ್ದಾರೆ. ಈ ಬಾರಿಯ ವಿಶೇಷವೆಂದರೆ ಬಿಜೆಪಿ ಘಟಾನುಘಟಿ ನಾಯಕರುಗಳಿಗೇ ಟಿಕೆಟ್‌ ನೀಡಿಲ್ಲ. ಅಂದರೆ ಸದ್ಯ ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವರಾಗಿರುವ ಮುಖಾ¤ರ್‌ ಅಬ್ಟಾಸ್‌ ನಖೀÌ ಅವರಿಗೆ ಟಿಕೆಟ್‌ ನೀಡಿಲ್ಲ. ಇವರನ್ನು ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಅಲ್ಲದೆ ವಿನಯ್‌ ಸಹಸ್ರಬುದ್ಧೆ ಮತ್ತು ಒ.ಪಿ. ಮಾಥುರ್‌ ಅವರಿಗೂ ಟಿಕೆಟ್‌ ಸಿಕ್ಕಿಲ್ಲ.

ಬಿಜೆಪಿಯಿಂದ ಉತ್ತರ ಪ್ರದೇಶದಲ್ಲಿ 8, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ ಮೂರು, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ತಲಾ ಎರಡು ಹಾಗೂ ರಾಜಸ್ಥಾನ, ಉತ್ತರಾಖಂಡ, ಝಾರ್ಖಂಡ್‌ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಸ್ಪರ್ಧಿಸಿದ್ದಾರೆ.

ಹರಿಯಾಣದಲ್ಲಿ ಪೆಟ್ಟು ಕೊಟ್ಟಿದ್ದ ಶರ್ಮ: ಮಾಧ್ಯಮ ದೊರೆ ಸುಭಾಷ್‌ ಚಂದ್ರ ಶರ್ಮ, ಕಳೆದ ಬಾರಿ ಹರಿಯಾಣದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಅಭ್ಯರ್ಥಿಯನ್ನೇ ಸೋಲಿಸಿದ್ದರು. ಈಗ ಇವರು ರಾಜಸ್ಥಾನದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಪ್ರಮುಖವಾಗಿ ಕಾಂಗ್ರೆಸ್‌ ಮತಗಳ ಮೇಲೆ ದೃಷ್ಟಿ ಇಟ್ಟಿದ್ದಾರೆ. ಬಿಜೆಪಿ ಬೆಂಬಲ ನೀಡಿರುವುದರಿಂದ ಇಲ್ಲಿ ಕಾಂಗ್ರೆಸ್‌ನಿಂದ ಅಡ್ಡಮತದಾನವಾಗುವ ಸಾಧ್ಯತೆ ಇದೆ. ಅತ್ತ ಹರಿಯಾಣದಲ್ಲೂ ಕಾರ್ತಿಕೇಯ ಶರ್ಮ ಸ್ಪರ್ಧಿಸಿದ್ದು, ಕಾಂಗ್ರೆಸ್‌ ಮತಗಳು ಚದುರುವ ಸಾಧ್ಯತೆ ಇದೆ.

ನಾಮಪತ್ರ ಸಲ್ಲಿಸಿದ ಪ್ರಮುಖರು
ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಅಜಯ್‌ ಮಾಕೇನ್‌, ರಾಜೀವ್‌ ಶುಕ್ಲಾ, ಬಿಜೆಪಿಯಿಂದ ಒಬಿಸಿ ಮೋರ್ಚಾ ಅಧ್ಯಕ್ಷ ಕೆ. ಲಕ್ಷ್ಮಣ್‌, ನಿರ್ಮಲಾ ಸೀತಾರಾಮನ್‌ ಸೇರಿ ಹಲವು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ. 3ರಂದು ವಾಪಸ್‌ ಪಡೆಯಲು ಕಡೇ ದಿನ. ಜೂ.10ಕ್ಕೆ ಮತದಾನ, ಅದೇ ದಿನ ಸಂಜೆ ಫ‌ಲಿತಾಂಶ ಹೊರಬೀಳಲಿದೆ. ಸದ್ಯ 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿ 95, ಕಾಂಗ್ರೆಸ್‌ 29 ಸದಸ್ಯರನ್ನು ಹೊಂದಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next