Advertisement

ಸಾಲ ಕೊಡಿಸುವ ನೆಪ: ಕೋಟ್ಯಂತರ ರೂ. ವಂಚನೆ

01:57 PM May 07, 2021 | Team Udayavani |

ಬೆಂಗಳೂರು: ರಾಜ್ಯದ ಉದ್ಯಮಿಗಳಿಗೆ ಕಡಿಮೆ ಬಡ್ಡಿಗೆ ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ವಂಚಿಸಿದ ತಮಿಳುನಾಡು ಮೂಲದ ರಿಯಲ್‌ಎಸ್ಟೇಟ್‌ ಉದ್ಯಮಿ ಸೇರಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಮೂಲದ ಎ.ಹರಿನಾಡರ್‌ ಅಲಿಯಾಸ್‌ ಹರಿ ಗೋಪಾಲಕೃಷ್ಣ ನಾಡರ್‌ಮತ್ತು ಕೇರಳ ಮೂಲದ ರಂಜಿತ್‌ ಪಣಿಕ್ಕರ್‌ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಕೆಲಸಹಚರರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವ ಆಮೀಷ:ಆರೋಪಿಗಳು ಬೆಂಗಳೂರಿನ ಉದ್ಯಮಿ ವೆಂಕಟಮಣಿ ಎಂಬುವರಿಗೆ 360 ಕೋಟಿ ರೂ. ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಶೇ.6ರಷ್ಟು ಬಡ್ಡಿಯಂತೆ ಲೋನ್‌ಕೊಡಿಸುವುದಾಗಿ ನಂಬಿಸಿದ್ದಾರೆ. ಬಳಿಕ ಕೇರಳದ ಪಂಚತಾರ ಹೋಟೆಲ್‌ಗ‌ಳಿಗೆ ಕರೆಯಿಸಿಕೊಂಡು ಸಭೆನಡೆಸಿ ಲೋನ್‌ ಮಂಜೂರಾಗಿರುವ ಬಗ್ಗೆ  360ಕೋಟಿ ರೂ. ಗಳ ನಕಲಿ ಡಿ.ಡಿ. ತೋರಿಸಿದ್ದಾರೆ.

ಬಳಿಕ ಈ ಡಿ.ಡಿ. ಬೇಕಾದಲ್ಲಿ ಲೋನ್‌ ಸರ್ವೀಸ್‌ ಚಾರ್ಜ್‌ ಆಗಿ ಲೋನ್‌ ಮೊತ್ತದ ಶೇ.2ರಷ್ಟು ಹಣ ನೀಡುವಂತೆ ಒತ್ತಾಯ ಮಾಡಿ 7.20 ಕೋಟಿ ರೂ. ಅನ್ನು ಅವರ ಖಾತೆಯಿಂದ ಆರೋಪಿ ಹರಿ ನಾಡರ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಆ ಡಿ.ಡಿ.ಬ್ಯಾಂಕ್‌ಗೆ ಕಳುಹಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.

ಹತ್ಯೆ ಮಾಡುವುದಾಗಿ ಬೆದರಿಕೆ: ಈ ಬಗ್ಗೆಆರೋಪಿಗಳನ್ನು ಪ್ರಶ್ನಿಸಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವೆಂಕಟರಮಣಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರುಪ್ರಮುಖ ಆರೋಪಿ ತಮಿಳುನಾಡಿನ ಹರಿ ನಾಡರ್‌ಅನ್ನು ಕೇರಳದ ಕೋವಲಂನಲ್ಲಿ ಬಂಧಿಸಲಾಗಿತ್ತು. ಈತನಿಂದ ಎರಡು ಕೋಟಿ ರೂ. ಮೌಲ್ಯದ 3.893ಗ್ರಾಂ ತೂಕದ ಚಿನ್ನಾಭರಣಗಳು, 8,76 ಲಕ್ಷ ರೂ.ನಗದು ಹಾಗೂ ಇನೋವಾ ಕಾರು ಅನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೂಬ್ಬ ಆರೋಪಿ ಸೆರೆ: ಮತ್ತೂಬ್ಬ ಆರೋಪಿ ರಂಜಿತ್‌ ಪಣಿಕ್ಕರ್‌ ಅಲಿಯಾಸ್‌ ರಂಜಿತ್‌ ಎಸ್‌ಪಣಿಕ್ಕರ್‌ ಅನ್ನು ಸಹ ಬಂಧಿಸಿದ್ದು, 10 ಲಕ್ಷ ರೂ.ಮೌಲ್ಯದ 140 ಗ್ರಾಂ ತೂಕದ ಚಿನ್ನಾಭರಣ, ವಜ್ರದ ಉಂಗುರಗಳು, ಒಂದು ಕಾರು, 96 ಸಾವಿರ ರೂ.ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಯಖಾತೆಯಲ್ಲಿದ್ದ 38,85 ಲಕ್ಷ ರೂ. ಜಪ್ತಿ ಮಾಡಲಾಗಿದೆಎಂದು ಪೊಲೀಸರು ಹೇಳಿದರು.

Advertisement

ಸಾಲ ಕೊಡಿಸುವುದಾಗಿ ವಂಚನೆ: ಆರೋಪಿ ಹರಿನಾಡರ್‌ ಈತ ತನ್ನ ಸಹಚರರ ಜತೆ ಸೇರಿಕೊಂಡುಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ,ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳ ಉದ್ಯಮಿಗಳಿಗೆ ಕೋಟ್ಯಂತರ ರೂ. ಹಣವನ್ನು ಕಡಿಮೆಬಡ್ಡಿಗೆ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಡಿ.ಡಿತೋರಿಸಿ ಅವರಿಂದ ಸರ್ವೀಸ್‌ ಜಾರ್ಜ್‌ ಆಗಿಕೋಟ್ಯಂತರ ರೂ. ಹಣ ಪಡೆದು ಸಾಲ ಕೊಡಿಸದೆ ವಂಚಿಸಿದ್ದಾನೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಾಗೂ ಆರೋಪಿಗಳ ಖಾತೆಯಿಂದ ಹಣವರ್ಗಾವಣೆಯಾಗಿರುವ ಪಲಾನುಭವಿಗಳ ಖಾತೆಗಳ ಪರಿಶೀಲನೆ ಹಾಗೂ ವಂಚನೆ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಡ್ರಗ್ಸ್‌ ದಂಧೆ: ವಿದೇಶಿ ಪ್ರಜೆ ಬಂಧನ

ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದವಿದೇಶಿ ಪ್ರಜೆಯನ್ನು ಕೇಂದ್ರ ಅಪರಾಧವಿಭಾಗ(ಸಿಸಿಬಿ) ಪೊಲೀಸರು ಪಿಟ್‌ ಎನ್‌ ಡಿಪಿಎಸ್‌ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.ನೈಜೀರಿಯಾ ಮೂಲದ ನೊನ್ಸೋ ಜೋಚಿನ್‌(27) ಬಂಧಿತ. ಆರೋಪಿ ಕೆಲ ದಿನಗಳ ಹಿಂದಷ್ಟೆಜೈಲಿನಿಂದ ಹೊರ ಬಂದಿದ್ದ. ಬಳಿಕ ಮತ್ತೆ ತನ್ನಸ್ನೇಹಿತರ ಜತೆ ಸೇರಿಕೊಂಡು ಅಕ್ರಮ ಚಟುವಟಿಕೆ ಆರಂಭಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. 2013ರಲ್ಲಿ ವ್ಯಾಪಾರಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ, ಬೆಂಗಳೂರಿಗೆ ಬಂದು ಬಾಣಸವಾಡಿ ಸಮೀಪದಲ್ಲಿ ಕುಟುಂಬ ಸಮೇತವಾಸವಾಗಿದ್ದ. ವೀಸಾದ ಅವಧಿ ಮುಗಿದ ಬಳಿಕಅಕ್ರಮವಾಗಿ ಹಣ ಸಂಪಾದಿಸಿದಲು ಆರೋಪಿಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾನೆ.

2017ರಿಂದ2020ರವರೆಗೆ ಸಿಸಿಬಿ ಪೊಲೀಸರೇ 4 ಬಾರಿ ಬಂಧಿಸಿದ್ದಾರೆ.ಬಳಿಕ ಬಿಡುಗಡೆಯಾಗಿ ಬಂದು ತನ್ನ ವಾಸ ಸ್ಥಳಬದಲಾವಣೆ ಮಾಡಿಕೊಂಡು ಮತ್ತೆ ಡ್ರಗ್ಸ್‌ದಂಧೆಯಲ್ಲಿ ತೊಡಗಿದ್ದಾನೆ. ಹೀಗಾಗಿ ಈತನನ್ನುಮಾದಕ ವಸ್ತು ಮಾರಾಟದಂತಹ ಕಾನೂನುಬಾಹಿರ ಚಟುಟಿಕೆಗಳನ್ನು ನಿಯಂತ್ರಿಸುವ ಪಿಐಟಿಎನ್‌ ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next