Advertisement

ಶಾಸಕ ಸಿದ್ದು ಸವದಿ ಅವರಿಂದ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ

07:07 PM Aug 16, 2021 | Team Udayavani |

ಬನಹಟ್ಟಿ: ಕರ್ನಾಟಕ ಸರ್ಕಾರ ಅಭಿವೃದ್ದಿಪಡಿಸಿದ ಮುಂಗಾರು ಬೆಳೆ ಸಮೀಕ್ಷೆ ೨೦೨೧-೨೨ ಎಂಬ ಮೊಬೈಲ್‌ ಆ್ಯಪ್‌ನ ಬಳಕೆ ಮಾಡಿ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ಅರಿವು ಮೂಡಿಸುವ ಹಾಗೂ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆಯನ್ನು ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ನಿಂಗಪ್ಪ ಕಲಹಳ್ಳಿ ಇವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್‌ಆ್ಯಪ್ ಮತ್ತು ಬೆಳೆ ಸಮೀಕ್ಷೆ ಉತ್ಸವ ೨೦೨೧ ಪೋಸ್ಟರ್‌ಗಳ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ತಾವು ಬೆಳೆಯುವ ಪ್ರತಿಯೊಂದು ಬೆಳೆಯ ಮಾಹಿತಿಯನ್ನುಆ್ಯಪ್ ಮೂಲಕ ಅಪ್ಲೋಡ್ ಮಾಡಿದಲ್ಲಿ ಸರಕಾರಕ್ಕೆ ಬೆಳೆಗಳ ವಿಸ್ತೀರ್ಣ ತಿಳಿಯಲು ಸಹಕಾರಿಯಾಗುತ್ತದೆ. ಅಲ್ಲದೇ ಪ್ರಕೃತಿ ವಿಕೋಪದಿಂದಾಗಿ ಬೆಳೆಗಳು ಹಾನಿಯಾದಾಗ, ಬೆಂಬಲ ಬೆಲೆ ಪಡೆಯಲು, ಬೆಳೆ ವಿಮೆ ಪಡೆದುಕೊಳ್ಳಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಅನುಕೂಲಕರವಾಗಲಿದೆಎಂದು ತಿಳಿಸಿದರು.

ಶಾಸಕರು ಸ್ವತಃ ಕ್ಷೇತ್ರಕ್ಕೆ ತೆರಳಿ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ ಪ್ರಕ್ರೀಯೆಯಲ್ಲಿ ಪಾಲ್ಗೊಂಡು ರೈತರ ವೈಯಕ್ತಿಕ ಹಾಗೂ ಬೆಳೆಗಳ ವಿವರ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ದಾಖಲು ಮಾಡುವ ಪದ್ದತಿಯನ್ನು ತಿಳಿದುಕೊಂಡರು. ಅಲ್ಲದೇ ರೈತರೊಂದಿಗೆ ಸಮಗ್ರ ಕೃಷಿ ಬೆಳೆ ಪದ್ದತಿ ಹಾಗೂ ವರ್ಟಿಕಲ್ ಫಾರ್ಮಿಂಗ್(ಲಂಬ ಕೃಷಿ) ಕುರಿತು ಚರ್ಚೆ ಮಾಡಿದರು.

ಸರ್ಕಾರ ವಿಜ್ಞಾನಿಗಳ ಸಹಕಾರದೊಂದಿಗೆ ಹೊಸ ಸಂಶೋಧನೆ ಮಾಡಿ ಉತ್ತಮ ತಳಿ & ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸುತ್ತಿದೆ.ಆದ್ದರಿಂದ ರೈತ ಬಾಂಧವರು ಆಧುನಿಕ ಕೃಷಿಯೊಂದಿಗೆ ವೈಜ್ಞಾನಿಕವಾಗಿ ಕೃಷಿ ಕೈಗೊಳ್ಳಬೇಕೆಂದು ಕರೆ ನೀಡಿದರು.

ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಂ. ಎಸ್. ಬುಜರುಖ್‌ ಅವರು ಮಾತನಾಡಿ ಕೃಷಿ ಆಭಿಯಾನ ಕಾರ್ಯಕ್ರಮದ ಉದ್ದೇಶ ಹಾಗೂ ಬೆಳೆ ಸಮೀಕ್ಷೆ ಮೊಬೈಲ್‌ಆಪ್ ಬಳಸುವ ವಿಧಾನ, ಸಮೀಕ್ಷೆಯ ಉದ್ದೇಶ ಹಾಗೂ ಬೆಳೆ ವಿಮೆ ಕುರಿತು ವಿಸ್ತಾರವಾಗಿ ತಿಳಿಸಿದರು.

Advertisement

ಪ್ರಗತಿಪರ ರೈತರಾದ ಬಸಪ್ಪ ಝಳಕಿ, ಮಹಾದೇವ ಮೋಪಗಾರ, ಸದಾಶಿವ ಸಂತಿ, ಮಹಾಂತೇಶ ಮಾಳಗೌಡ, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರಾದ ಅಭಯ ಮೊರಬ, ಸಹಾಯಕ ತೋಟಗಾರಿಕೆ ಅಧಿಕಾರಿ ಈರಣ್ಣ ಹೊಸಮನಿ, ಕೃಷಿ ಅಧಿಕಾರಿ ಎಸ್ ಎಂ ಬಿರಾದಾರ, ಸಹಾಯಕ ಕೃಷಿ ಅಧಿಕಾರಿ ಬಿ ಪಿ ಚೌಗಲಾ, ಆತ್ಮಯೋಜನೆಯ ಅಧಿಕಾರಿಗಳಾದ ಕೆ ಎ ಜಮಖಂಡಿ, ಪ್ರವೀಣ ಕೊಪ್ಪದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next