ನಂಜನಗೂಡು: ಬೆಳೆದ ಬೆಳೆಗಳ ಸಮೀಕ್ಷೆ ಹಾಗೂವಿಮೆ ಕೃಷಿಕರ ಪಾಲಿಗೆ ಅತ್ಯಂತ ಉಪಯುಕ್ತ ಎಂದುಶಾಸಕ ಹರ್ಷವರ್ಧನ್ ತಿಳಿಸಿದರು.
ಕೃಷಿ ಇಲಾಖೆ ನೇತೃತ್ವದಲ್ಲಿ ನಡೆದ ತಾಲೂಕಿನಕ್ಷೇತ್ರವಾರು ಬೆಳೆ ಸಮೀಕ್ಷೆಗೆ ತಾಲೂಕಿನ ಅಂಡುವಿನಹಳ್ಳಿಯಲ್ಲಿ ರೈತ ರಾಜಣ್ಣನವರ ಬಾಳೆ ತೋಟದಲ್ಲಿರೈತರಿಗೆ ಕರಪತ್ರ, ಮಾಸ್ಕ್ ಹಾಗೂ ಟಿ ಶರ್ಟ್ ನೀಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಯನ್ನು ಸಮೀಕ್ಷೆ ಮೂಲಕದಾಖಲಿಸಿದಾಗ ರಾಜ್ಯದಲ್ಲಿ ಆ ವರ್ಷ ಯಾವ್ಯಾವಬೆಳೆಗಳನ್ನು ಎಷ್ಟು ಬೆಳೆಯಲಾಗಿದೆ ಎಂಬ ನಿಖರವಾದಮಾಹಿತಿಯೂ ಲಭ್ಯವಾಗಲಿದೆ. ಪ್ರಕೃತಿ ವಿಕೋಪಕ್ಕೆಸಿಲುಕಿ ಆ ಬೆಳೆ ಹಾನಿಯಾದರೂ ಪರಿಹಾರ ಪಡೆಯಲೂ ಸಹಾಯವಾಗಲಿದೆ.
ಈ ಉಪಯುಕ್ತಯೋಜನೆಯನ್ನು ಜಾರಿಗೆ ತಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಅಭಿನಂದಿಸುವುದಾಗಿ ಅವರುಹೇಳಿದರು.ತಾಲೂಕು ಸಹಾಯಕ ಕೃಷಿ ಅಧಿಕಾರಿ ದೀಪಕುಮಾರ್ ಮಾತನಾಡಿ, ಕೃಷಿಕರು ತಾವೇ ಮುಂದಾಗಿಬೆಳೆ ಸಮೀಕ್ಷೆಗೆ ಸಹಕರಿಸಬೇಕು ಹಾಗೂ ಬೆಳೆಬೆಳೆದಾಗಲೇ ಅದಕ್ಕೆ ವಿಮೆಯನ್ನೂ ಮಾಡಿಸಿಕೊಳ್ಳಬೇಕು. ಬೆಳೆಗಳ ಫೋಟೋ ತೆಗೆದು ಕೃಷಿ ಇಲಾಖೆಯಡಿಜಿಟಲ್ ತಂತ್ರಜ್ಞಾನದ ಮೂಲಕ ಅಪ್‌ಲೋಡ್‌ಮಾಡಿದಾಖಲಿಸಬೇಕು.ಇದರಿಂದಬೆಳೆ ನಷ್ಟಅಥವಾಪ್ರಾಕೃತಿಕ ವಿಕೋಪ ಸಂಭವಿಸಿದರೆ ಬೆಳೆ ಪರಿಹಾರ ಸೌಲಭ್ಯ ಪಡೆಯಬಹುದುಎಂದು ಸಲಹೆ ನೀಡಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿವಿವಿಧ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳಬೇಕು.ಕನಿಷ್ಠ ವಿಮೆ ಪಾವತಿಸಿ ಬೆಳೆ ಕೈ ಕೊಟ್ಟರೆ ಗರಿಷ್ಠಸಹಾಯ ಪಡೆದುಕೊಳ್ಳಬೇಕು ಎಂದು ಅವರುಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ಉಪ ಕೃಷಿ ನಿರ್ದೇಶಕ ಸೋಮಶೇಖರ್,ತಾಲೂಕು ತೋಟಗಾರಿಕೆ ಅಧಿಕಾರಿ ಗುರುಸ್ವಾಮಿ,ಕೃಷಿ ಅಧಿಕಾರಿಗಳಾದ ಶಿವಣ್ಣ, ತೇಜಸ್ವಿ, ಪುಟ್ಟಸ್ವಾಮಿ,ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ, ಕಂದಾಯನಿರೀಕ್ಷಕ ಪ್ರಕಾಶ್, ಜಮೀನಿನ ಮಾಲಿಕ ರಾಜಣ್ಣ,ಭಾರತ್ ಏಕ್ಸಾ ಕಂಪನಿಯ ವ್ಯವಸ್ಥಾಪಕ ಕಿರಣಲಮಾಣಿ, ಚಂದ್ರಶೇಖರ್ ಸೇರಿದಂತೆ ಅಂಡವಿನಹಳ್ಳಿಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.