Advertisement

ರಾಮದುರ್ಗ: ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ

01:14 PM Aug 23, 2020 | Suhan S |

ರಾಮದುರ್ಗ: ಲಕ್ಷ್ಮೀ ವೆಂಕಟೇಶ್ವರ ರೈತೋತ್ಪಾದಕ ಕಂಪನಿ ಹಾಗೂ ಕೃಷಿ ಇಲಾಖೆ ಸೇರಿದಂತೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತಾಲೂಕಿನ ದಾಡಿಬಾವಿ ಗ್ರಾಮದ ಸದಾಶಿವ ಮಾತನವರ ತೋಟದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಯೋಜನೆ (ಪಿಪಿಪಿ-ಐಎಡಿ)ಯಡಿ ರೈತರ ಬೆಳೆ ಸಮೀಕ್ಷೆಯನ್ನು ಮೊಬೈಲ್‌ ಆ್ಯಪ್‌ ಮೂಲಕ ನೋಂದಣಿ ಮಾಡುವ ಪ್ರಾಯೋಗಿಕ ಕಾರ್ಯಕ್ರಮ ನಡೆಯಿತು.

Advertisement

ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯಡಿ ಮತ್ತು ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೀಲಿಂಧ್ರರಹಿತ ಮೆಕ್ಕೆಜೋಳ ಹೇಗೆ ಬೆಳೆಯಬೇಕು ಮತ್ತು ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ರೈತರು ತಾವೇ ಸ್ವತಃ ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ನಲ್ಲಿ ಹೇಗೆ ನೋಂದಣಿ ಮಾಡಬೇಕು ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಐಎಫ್‌ಎಚ್‌ಡಿ ಸಂಸ್ಥೆ ಸಿಬ್ಬಂದಿ ವಾಸುದೇವ ಸನಸತ್ತಿ ತಿಳಿಸಿದರು.

ಪ್ರವಾಹ ಮತ್ತು ಬರಗಾಲ ಸಮಯದಲ್ಲಿ ಸರ್ಕಾರ ನಿಡುವ ನಷ್ಟ ಪರಿಹಾರ ವಿತರಿಸಲು ಈ ಸಮೀಕ್ಷೆ ಸಹಾಯವಾಗುತ್ತದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಅರ್ಹಫಲಾನುಭವಿಗಳನ್ನು ಗುರುತಿಸಲು,  ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖೀಕ ಇಲಾಖೆ, ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು ಮತ್ತು ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಈ ಬೆಳೆ ಸಮೀಕ್ಷೆ ಆ್ಯಪ್‌ ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಈ ವೇಳೆ ಲಕ್ಷ್ಮೀ ವೆಂಕಟೇಶ್ವರ ರೈತೋತ್ಪಾದಕ ಕಂಪನಿ ಅಧ್ಯಕ್ಷ ಸದಾಶಿವ ಮಾತನವರ, ಐಎಫ್‌ಎಚ್‌ಡಿ ಸಂಸ್ಥೆ ಸಿಬ್ಬಂದಿಗಳಾದ ಈರಣ್ಣ, ಮಹಾಂತೇಶ ಮೊದಲಬಾವಿ, ಬಸವರಾಜ, ಚೇತನ, ರಾಜೇಶ, ಶ್ರೀಧರ, ಶಿವಾನಂದ, ಮಹಾತೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next