Advertisement

ಸಬೂಬು ಹೇಳದೆ ಬೆಳೆ ವಿಮೆಯನ್ನು ವಿತರಿಸಬೇಕು: ಮಧು ಬಂಗಾರಪ್ಪ

06:15 PM Jul 13, 2022 | Team Udayavani |

ಸಾಗರ: ಬೆಳೆ ವಿಮೆ ಕಟ್ಟುವ ದಿನಾಂಕವನ್ನು ಮುಂದೂಡಬೇಕು ಹಾಗೂ ಬೆಳೆ ವಿಮೆಯನ್ನು ರೈತರಿಗೆ ಸಬೂಬು ಹೇಳದೆ ವಿತರಿಸುವಂತಾಗಬೇಕು ಎಂದು ಮಾಜಿ ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದರು.

Advertisement

ಬುಧವಾರ ತಾಲೂಕಿನ ಬರದವಳ್ಳಿ, ಕಾನ್ಲೆ, ಬೀಸನಗದ್ದೆ, ಮುಂತಾದ ನೆರೆಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ ತಾಳಗುಪ್ಪದ ಗುಂಡಿಬೈಲ್ ಗದ್ದೆ ಮುಳುಗಡೆ ವೀಕ್ಷಿಸಿ ಮಾತನಾಡಿ, ಮಲೆನಾಡಿನ ಮಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದು ಪ್ರಕೃತಿಯ ನಿಯಮ, ಆದರೆ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡು ಅನಾಹುತ ತಪ್ಪಿಸುವ ಕೆಲಸ ಮಾಡಬೇಕು. ಜನರಿಗೆ ಪರಿಹಾರ ಕೊಡುವ ಕೆಲಸ ಸರ್ಕಾರ ಜನಪ್ರತಿನಿಧಿಗಳು ಮಾಡಬೇಕು. ಅದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ತಾಳಗುಪ್ಪ ಹೋಬಳಿಯಲ್ಲಿ ಬೆಳೆ ವಿಮೆ ಸಮರ್ಪಕ ವಿಂಗಡನೆಯಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೆರೆ ಪರಿಹಾರವನ್ನಾದರೂ ಕಣ್ಣೊರೆಸುವ ತಂತ್ರವನ್ನಾಗಿಸದೆ ಅಧಿಕಾರಿಗಳು ಸಮರ್ಪಕವಾಗಿ ವಿತರಿಸಬೇಕು ಎಂದರು.
ಬೆಳೆವಿಮೆ ಕುಂಟುನೆಪ ಹೇಳಿ ಇಲ್ಲವಾಗಿಸುವ ಕೆಲಸ ನಡೆಯಿತ್ತದೆ. ನಾನು ಎಂಎಲ್‌ಎ ಆಗಿದ್ದಾಗ ಕಂಪನಿಗಳ ಜತೆ ಮಾತನಾಡಿ ಸಮರ್ಪಕ ಪರಿಹಾರ ನೀಡುವಂತೆ ಮಾಡಿದ್ದೆ. ಅದೇ ರೀತಿ ರೈತರ ಸಂಕಷ್ಟಕ್ಕೆ ಶಾಸಕರು ಸ್ಫಂದಿಸಬೇಕು. ನೆರೆ ಹತ್ತುವ ಜಾಗ ಗುರುತಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೇವಲ ಪ್ರತೀ ಮಳೆಗಾಲಕ್ಕೂ ಸುಳ್ಳು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಿದರೆ ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದರು.

ನೆರೆ ಪರಿಹಾರ ವೀಕ್ಷಣೆಯಲ್ಲಿ ಗಣಪತಿ ಹುಲ್ತಿಕೊಪ್ಪ, ಅಶೋಕ್ ಬರದವಳ್ಳಿ, ಶಿವಮೂರ್ತಿ, ಲೋಕೇಶ್ ಗಾಳಿಪುರ, ಸಿರಿವಂತೆ ಗ್ರಾಪಂ ಅಧ್ಯಕ್ಷ ಮನೋಜ್ ಜನ್ನೆ ಹಕ್ಲು, ಮಾದೇವಪ್ಪ, ರಾಜೇಶ್ ಸೈದೂರು, ಮಂಜುನಾಥ ಕಗ್ಗೆ, ಅಣ್ಣಪ್ಪ ಕುಗ್ವೆ, ಫ್ರಾನ್ಸಿಸ್ ಲೂಪೀಸ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next