Advertisement
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದಿದ್ದ ರೈತ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ 2016-17ನೇ ಸಾಲಿನಿಂದ ಜಾರಿಗೆ ಬಂದಿದ್ದು, ಬೇರೆ ಬೇರೆ ರಾಜ್ಯಗಳು ಇದರ ಲಾಭ ಪಡೆಯುತ್ತಿವೆ. ಕಡಿಮೆ ಹಾಗೂ ಏಕರೂಪದ ವಿಮಾ ಕಂತು ಪಾವತಿಸಬೇಕಿದೆ. ಮುಂಗಾರು ಬೆಳೆಗೆ ಶೇಕಡ 2, ಹಿಂಗಾರು ಬೆಳೆಗೆ ಶೇ.1.5, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು ಕಂತು ಪಾವತಿಸಿದರೆ ಸಂಪೂರ್ಣ ವಿಮಾ ಮೊತ್ತ ರೈತರಿಗೆ ಸಂದಾಯವಾಗುತ್ತದೆ ಎಂದರು.
Related Articles
Advertisement
ಭಿತ್ತನೆ ಬೀಜ ಕೊಡುವಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆ ವಿಮೆ ಕಂತು ಪಡೆದುಕೊಂಡರೆ, ರೈತರು ವಿಮೆ ನೋಂದಣಿಗೆ ಬ್ಯಾಂಕ್‌ಗಳಿಗೆ ಅಲೆಯುವುದು ತಪ್ಪುತ್ತದೆ ಎಂದು ಕೆಲ ರೈತರು ಸಲಹೆ ನೀಡಿದರು. ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯಿಂದ ವರದಿ ತರಿಸಿಕೊಂಡಿದೆ ಎಂದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಅತ್ತಹಳ್ಳಿ ದೇವರಾಜ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು ಮತ್ತಿತರರು ಭಾಗವಹಿಸಿದ್ದರು.
ಬಣ್ಣಾರಿ ಕಾರ್ಖಾನೆ ವಿರುದ್ಧ ರೈತರ ತೀವ್ರ ಆಕ್ರೋಶ ನಂಜನಗೂಡಿನ ಬಣ್ಣಾರಿ ಸಕ್ಕರೆ ಕಾರ್ಖಾನೆ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಕ್ಕರೆ ಇಳುವರಿಯ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಯಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಶೇ.10.5ರಿಂದ ಶೇ.11 ರಷ್ಟು ಸಕ್ಕರೆ ಇಳುವರಿ ಬರುತ್ತಿತ್ತು. ಈಗ ಶೇ.8.9ರಷ್ಟು ಇಳುವರಿ ತೋರಿಸ ಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಒಂದೇ ಕಾರ್ಖಾನೆ ಮೈಸೂರಿನಲ್ಲಿ ಎರಡು ರೀತಿಯ ದರ ನೀಡುತ್ತಿದೆ. ಒಂದು ಕಡೆ ಪ್ರತಿ ಟನ್ ಕಬ್ಬಿಗೆ 2500 ರೂ. ನೀಡಿದರೆ ಮತ್ತೂಂದು ಕಾರ್ಖಾನೆಯಲ್ಲಿ 2300 ರೂ. ನೀಡುತ್ತಿದೆ. ಈ ತಾರತಮ್ಯ ಹೋಗಲಾಡಿಸಬೇಕು ಎಂದು ರೈತರು ಹೇಳಿದರು. ಬಣ್ಣಾರಿ ಸಕ್ಕರೆ ಕಾರ್ಖಾನೆಯ ಮೂರು ವರ್ಷದ ಅಂಕಿ-ಅಂಶಗಳನ್ನು ಪಡೆದು, ಸಕ್ಕರೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಚುಂಚನ ಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಬಗ್ಗೆ ಸರ್ಕಾರಕ್ಕೆ ಎರಡು ಪುಟಗಳ ವರದಿ ನೀಡಿದ್ದು, ಸಚಿವ ಸಂಪುಟದಲ್ಲಿ ಆ ಬಗ್ಗೆ ನಿರ್ಧಾರ ಕೈಗೊಳ್ಳ ಬೇಕಿದೆ ಎಂದು ಸಬೆಗೆ ಮಾಹಿತಿ ನೀಡಿದರು. ಕೃಷಿ ಉತ್ಪನ್ನದ ಹಣ ಸಾಲಕ್ಕೆ ವಜಾ: ಖಂಡನೆ
ಕಬ್ಬು ಮಾರಾಟದ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಈ ಹಣವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಹೊಂದಿಸಿಕೊಳ್ಳುತ್ತಿವೆ. ಇದರಿಂದ ರೈತರಿಗೆ ಕೃಷಿ ಉತ್ಪನ್ನದ ಹಣ ಸಿಗುತ್ತಿಲ್ಲ. ರೈತ ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ರೈತ ಮುಖಂಡರು ಹೇಳಿ ದಾಗ, ಅಂತಹ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ರೈತರ ಬ್ಯಾಂಕ್ ಖಾತೆಗೆ ಬರುವ ಕೃಷಿ ಉತ್ಪನ್ನ ಮಾರಾಟದ ಹಣ ಹಾಗೂ ಬೆಳೆ ಪರಿಹಾರದ ಹಣವನ್ನು ಬ್ಯಾಂಕುಗಳು ಬಲವಂತವಾಗಿ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ. ಈ ಬಗ್ಗೆ ಸದ್ಯದಲ್ಲೇ ಬ್ಯಾಂಕರುಗಳ ಸಭೆ ಕರೆದು ಸೂಚನೆ ನೀಡ ಲಾಗುವುದು ಎಂದು ರಂದೀಪ್ ಹೇಳಿದರು. 2 ಹಂತದಲ್ಲಿ 7 ಗಂಟೆ ವಿದ್ಯುತ್
ಸದ್ಯದ ಪರಿಸ್ಥಿತಿಯಲ್ಲಿ ಹಗಲು 4 ಗಂಟೆ, ರಾತ್ರಿ ವೇಳೆ 3 ಗಂಟೆ ಕಾಲ ತ್ರಿಪೇಸ್ ವಿದ್ಯುತ್ ನೀಡಲಾಗುತ್ತಿದ್ದು, ಇದರ ಬದಲಿಗೆ ಒಂದೇ ಅವಧಿಗೆ 7 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಪದ್ಧತಿ ಜಾರಿಯಾದರೆ ಮೈಸೂರು ಭಾಗದ 199 ವಿದ್ಯುತ್ ಸ್ಟೇಷನ್‌ಗಳ ಪೈಕಿ 99 ಸ್ಟೇಷನ್‌ಗಳಲ್ಲಿ ನೀರಾವರಿಗೆ ವಿದ್ಯುತ್ ಕೊಡಲಾಗುತ್ತಿದ್ದು, ಇದರಲ್ಲಿ 50 ಸ್ಟೇಷನ್‌ಗಳಲ್ಲಿ ಎರಡು ಹಂತಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುವುದು ಎಂದು ಸೆಸ್ಕ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.