Advertisement
ಅರಣ್ಯ ಪಕ್ಕದ ಪ್ರದೇಶದಲ್ಲಿ ಸ್ಥಳೀಯರೊಬ್ಬರ ಜಾಗದಲ್ಲಿ ಬತ್ತಿದ ಬಾವಿಯಲ್ಲಿ ಐದೂವರೆ ಅಡಿ ಉದ್ದದ ಮೊಸಳೆ ನೋಡಲು ಜನ ಮುಗಿ ಬಿದ್ದಿದ್ದರು. ಪಕ್ಕದ ನದಿಯಲ್ಲಿ ನೀರು ಬತ್ತಿರುವುದರಿಂದ ಆಹಾರ ಹುಡುಕಿ ಬಂದ ಮೊಸಳೆ 15 ಅಡಿ ಆಳದ ಬಾವಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಉಪ ವಲಯ ಅರಣ್ಯ ಅಧಿಕಾರಿ ಎಸ್. ವಿನೋದ್ ಭೇಟಿ ನೀಡಿದ್ದಾರೆ. ಮೊಸಳೆಗೆ ಅಗತ್ಯ ಆಹಾರ ಪೂರೈಕೆ ವ್ಯವಸ್ಥೆಯನ್ನು ಅರಣ್ಯ ಅಧಿಕಾರಿಗಳು ಮಾಡಿದ್ದಾರೆ.
ಪಿಲಿಕುಳ ನಿಸರ್ಗಧಾಮಕ್ಕೆ ಮಾಹಿತಿ ನೀಡಿದ್ದು ಮೊಸಳೆಯನ್ನು ಸುರಕ್ಷಿತವಾಗಿ ಮೇಲೆ ತ್ತಲು ನಿರ್ಧರಿಸಲಾಗಿದೆ. ಸೋಮವಾರ ಅದನ್ನು ಹೊರತೆಗೆಯ ಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರನ್ನು ಕಂಡು ಮೊಸಳೆ ತೀವ್ರ ಪ್ರತಿರೋಧ ತೋರುತ್ತಿದೆ. ಈ ನಿಟ್ಟಿನಲ್ಲಿ ಪಿಲಿಕುಳ ತಜ್ಞರು ಬಂದು ಪರಿಶೀಲಿಸಿ ಗಾಯವಾಗಿದ್ದರೆ ಪಿಲಿಕುಳಕ್ಕೆ ಹಸ್ತಾಂತರ ಮಾಡಲಾಗುವುದು. ಯಾವುದೇ ಘಾಸಿಯಾಗದಿದ್ದರೆ ಚಾರ್ಮಾಡಿ ನದಿಗೆ ಬಿಡುಲಾಗುವುದು ಎಂದು ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ತಿಳಿಸಿದ್ದಾರೆ.