Advertisement

Gujarat Floods: ಪ್ರವಾಹದಿಂದ ಮನೆಯ ಮೇಲೆ ರಕ್ಷಣೆ ಪಡೆದ ಮೊಸಳೆ… ಜೀವ ಭಯದಲ್ಲಿ ಜನ

01:49 PM Aug 30, 2024 | Team Udayavani |

ಗುಜರಾತ್: ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ವಡೋದರಾ ಮತ್ತು ಜಾಮ್‌ನಗರ ಸೇರಿದಂತೆ ಗುಜರಾತ್‌ನ ಹಲವು ನಗರಗಳು ಮುಳುಗಿವೆ.

Advertisement

ಗುರುವಾರ (ಆಗಸ್ಟ್ 29) ಮಳೆ ಕೊಂಚ ಕಡಿಮೆಯಾಗಿದ್ದು ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಆದರೂ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ವಡೋದರಾ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಮುಂದುವರೆದಿದೆ. ಈ ನಡುವೆ ಅಧಿಕಾರಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಇದರ ನಡುವೆ ಪ್ರವಾಹದ ನೀರಿನಲ್ಲಿ ದೈತ್ಯ ಮೊಸಳೆಗಳು ಶಾಲಾ ಕಾಲೇಜು ಸೇರಿದಂತೆ ಜನವಸತಿ ಪ್ರದೇಶಗಳತ್ತ ಬರುತ್ತಿದೆ ಎನ್ನಲಾಗಿದೆ, ಇನ್ನೊಂದೆಡೆ ವಡೋದರದ ಅಕೋಟಾ ಸ್ಟೇಡಿಯಂ ಪರಿಸರದ ಮನೆಯೊಂದರ ಛಾವಣಿಯ ಮೇಲೆ ಮೊಸಳೆ ವಿಶ್ರಾಂತಿ ಪಡೆಯುತ್ತಿರುವುದು ಕಂಡುಬಂದಿದ್ದು ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ವಿಶ್ವಾಮಿತ್ರಿ ನದಿಯ ಪ್ರವಾಹದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳ ಗುಂಪು ವಡೋದರದ ಹಲವು ಪ್ರದೇಶಗಳಿಗೆ ಪ್ರವೇಶಿಸಿದೆ ಎನ್ನಲಾಗಿದ್ದು ಇದೀಗ ಮೊಸಳೆಗಳ ಭಯದಿಂದ ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

300 ಮೊಸಳೆಗಳಿಗೆ ನೆಲೆಯಾದ ವಿಶ್ವಾಮಿತ್ರಿ ನದಿ
ಇಲ್ಲಿನ ವಿಶ್ವಾಮಿತ್ರಿ ನದಿ ಮೊಸಳೆಗಳ ಆವಾಸ ಸ್ಥಾನವಾಗಿದೆ ಇಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಮೊಸಳೆಗಳು ಇವೆ ಎಂದು ಹೇಳಲಾಗಿದೆ, ಅಲ್ಲದೆ ಭಾರಿ ಮಳೆಯ ಪರಿಣಾಮ ನದಿ ತುಂಬಿ ಹರಿಯುತ್ತಿದ್ದು ಪ್ರವಾಹದ ನೀರಿನಲ್ಲಿ ದೈತ್ಯ ಮೊಸಳೆಗಳು ಪಕ್ಕದ ಪ್ರದೇಶಗಳಿಗೆ ಸೇರಿಕೊಂಡಿದೆ ಎಂದು ಹೇಳಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next