Advertisement

Uppinangady: ಸೇತುವೆ ಬದಿ ಮೊಸಳೆ ಪತ್ತೆ

12:49 AM Sep 04, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿಯ ನೇತ್ರಾವತಿ ನದಿಯ ಬದಿ ಸೆ. 3ರಂದು ಮೊಸಳೆಯೊಂದು ಪತ್ತೆಯಾಗಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

Advertisement

ನದಿಯ ಬದಿಯಲ್ಲಿ ಮಂಗಳವಾರ ಸಂಜೆ ಮೊಸಳೆಯೊಂದು ಮರಳ ದಿಬ್ಬದಲ್ಲಿ ವಿರಮಿಸುತ್ತಿರುವುದನ್ನು ಇಳಂತಿಲ ಗ್ರಾ.ಪಂ. ಮಾಜಿ ಸದಸ್ಯ, ಫ‌ಯಾಜ್‌ ಯು.ಟಿ. ಗಮನಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ದೊಡ್ಡ ಗಾತ್ರದ ಮೊಸಳೆ ಆಗಿದೆ.

ಕಳೆದ 2022ರ ಸೆಪ್ಟಂಬರ್‌ನಲ್ಲಿ ಪಂಜಳದ ಪೆಟ್ರೋಲ್‌ ಪಂಪ್‌ ಸಮೀಪ ನೇತ್ರಾವತಿ ನದಿಯಲ್ಲಿ ಮೂರು ಮೊಸಳೆಗಳು ಕಂಡು ಬಂದಿದ್ದವು. ಮಧ್ಯಾಹ್ನ ಹೊತ್ತಿನಲ್ಲಿ ನದಿ ಮಧ್ಯದಲ್ಲಿ ಮರಳ ದಿಬ್ಬದ ಮೇಲೆ ಈ ಮೊಸಳೆಗಳು ವಿಶ್ರಾಂತಿ ಪಡೆದಿರುವುದು ಕಂಡು ಬಂದಿತ್ತು. ಇದರಲ್ಲಿ ಒಂದು ಮೊಸಳೆ ದೊಡ್ಡ ಗಾತ್ರದಾದರೆ, ಇನ್ನೆರಡು ಮೊಸಳೆಗಳು ಅದಕ್ಕಿಂತ ಸ್ವಲ್ಪ ಸಣ್ಣ ಗಾತ್ರದ್ದಾಗಿದ್ದವು. ಆದರೆ ಈ ಬಾರಿ ಒಂದು ಮೊಸಳೆ ಮಾತ್ರ ಕಂಡು ಬಂದಿದೆ. ಇದು ನೇತ್ರಾವತಿ ನದಿಯಲ್ಲಿ ಮೊಸಳೆಗಳ ವಾಸ ಇವೆ ಎನ್ನುವುದಕ್ಕೆ ಪುಷ್ಠಿ ನೀಡಿದೆ.

ಮಂಗಳವಾರ ಮೊಸಳೆ ಕಂಡು ಬಂದ ಸ್ಥಳದಿಂದ ಸುಮಾರು 500 ಮೀ. ದೂರದಲ್ಲಿ ನೇತ್ರಾವತಿ- ಕುಮಾರಧಾರ ನದಿಗಳು ಸಂಗಮವಾಗುತ್ತಿದ್ದು, ಅಲ್ಲೇ ಇರುವ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ಪಿಂಡ ಪ್ರದಾನ ಕಾರ್ಯ, ತೀರ್ಥ ಸ್ನಾನಗಳು ನಿರಂತರ ನಡೆಯುತ್ತಿವೆ. ಇದೀಗ ಈ ಸ್ಥಳದಲ್ಲಿ ಮೊಸಳೆ ಕಂಡು ಬಂದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next