Advertisement

ಮಹಿಳೆಯರಿಗಾಗಿ ಕಾಂಗ್ರೆಸ್ ಕಾರ್ಯಕ್ರಮಗಳ ಟೀಕೆ ಬಿಜೆಪಿಯ ಸಣ್ಣತನ : ಮಮತಾ ಗಟ್ಟಿ

04:00 PM Jan 19, 2023 | Team Udayavani |

ಮಂಗಳೂರು: ಮುಂದಿನ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಕೆಪಿಸಿಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವುದನ್ನು ಬಿಜೆಪಿ ಮುಖಂಡರು ಟೀಕಿಸುತ್ತಿರುವುದು ಅವರ ಸಣ್ಣತನವನ್ನು ತೋರಿಸುತ್ತದೆ. ಇದು ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಎಷ್ಟು ಗೌರವ ಇದೆ ಎನ್ನುವುದು ತೋರಿಸುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಹೇಳಿದ್ದಾರೆ.

Advertisement

ಗುರುವಾರ ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾ-ನಾಯಕಿ ಸಮಾವೇಶಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಸರಕಾರದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬರೆದು ಕಳುಹಿಸುವಂತೆ ರಾಜ್ಯದ ಮಹಿಳೆಯರಲ್ಲಿ ಮನವಿ ಮಾಡಿದ್ದರು. ಅದರಂತೆ ಸಮಸ್ಯೆಗಳ ಸರಮಾಲೆ ಹೊಂದಿದ್ದ ಲಕ್ಷಾಂತರ ಸಂಖ್ಯೆಯ ಪತ್ರಗಳು ಅವರಿಗೆ ತಲುಪಿತ್ತು. ಇದನ್ನು ಪರಿಶೀಲಿಸಿದ ಅವರು, ಮಹಿಳಾ ಪರ ಕಾರ್ಯಕ್ರಮಗಳಾಗಿ ಪ್ರತಿ ತಿಂಗಳು ಮನೆ ಯಜನಮಾನಿಗೆ 2 ಸಾವಿರ ರೂ. ಭತ್ತೆ, ತಿಂಗಳಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಘೋಷಿಸಿದ್ದರು ಎಂದರು.

ಶ್ಲಾಘಿಸಬೇಕಾದ ಇಂತಹ ಯೋಜನೆಗಳ ಬಗ್ಗೆ ಮುಖ್ಯಮಂತ್ರಿಯಾದಿಯಾಗಿ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಬಿಜೆಪಿ ಸರಕಾರದ ಮಹಿಳಾ ವಿರೋಧಿ ಧೋರಣೆಗಳಿಗೆ ಇದೇ ಸಾಕ್ಷಿ ಎಂದರು. ಕಾಂಗ್ರೆಸ್ ಪದಾಧಿಕಾರಿಗಳಾದ ಸುರೇಖಾ ಚಂದ್ರಹಾಸ್, ಮಲ್ಲಿಕಾ ಪಕ್ಕಳ, ಚಂದ್ರಕಲಾ ಕದ್ರಿ, ಚಂದ್ರಿಕಾ ರೈ, ಸಬಿತಾ ಮಿಸ್ಕಿತ್, ತನ್ವೀರ್ ಶಾ, ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next