Advertisement

CAA ವಿರುದ್ಧ ಟೀಕೆ; ಅಮೆರಿಕಕ್ಕೆ ನಮ್ಮ ಇತಿಹಾಸ ಬಗ್ಗೆ ಗೊತ್ತಿಲ್ಲ: ಜೈಶಂಕರ್‌

12:39 AM Mar 18, 2024 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಟೀಕಿಸಿದ ಅಮೆರಿಕಕ್ಕೆ ಭಾರತೀಯ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ತಿರುಗೇಟು ನೀಡಿದ್ದಾರೆ. ಕಾನೂನಿನ ಐತಿಹಾಸಿಕ ಸಂದರ್ಭದ ಬಗ್ಗೆ ತಿಳಿದುಕೊಳ್ಳದೇ ಅಮೆರಿಕ ಟೀಕೆ ಮಾಡಿದೆ. ದೇಶ ಒಡೆದುದ್ದರಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸಲು ಈ ಕಾಯ್ದೆ ಜಾರಿ ಮಾಡಲಾಗಿದೆ. ಆದರೆ, ಜಗತ್ತು ಮಾತ್ರ ದೇಶ ಒಡದೇ ಇಲ್ಲ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ ಎಂದು ಜೈಶಂಕರ್‌ ಹೇಳಿದ್ದಾರೆ.

Advertisement

ಖಾಸಗಿ ಸುದ್ದಿವಾಹಿನಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಜೈಶಂಕರ್‌, ನಾನು ಅಮೆರಿಕದ ಪ್ರಜಾ ಪ್ರಭುತ್ವ, ತತ್ವಗಳ ನ್ಯೂನತೆಗಳ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ಇತಿಹಾಸದ ಬಗೆಗಿನ ಅವರ ತಿಳಿವಳಿಕೆಯನ್ನು ಪ್ರಶ್ನಿಸುತ್ತಿದ್ದೇನೆ ಎಂದರು. ಭಾರತ ದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟಿ ಸಿಎಎ ಕಾಯ್ದೆ ಜಾರಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್‌, ಭಾರತವನ್ನು ಟೀಕಿಸುತ್ತಿರುವ ದೇಶಗಳು ತಮ್ಮ ನೀತಿಗಳನ್ನು ಪರಿಶೀಲಿಸಿಕೊಳ್ಳುವುದು ಒಳಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next