Advertisement
ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೂ ಮುನ್ನ ಮ್ಯಾಂಚೆಸ್ಟರ್ ಯುನೈಟೆಡ್ ಜತೆಗಿನ ರೊನಾಲ್ಡೊ ಸಂಬಂಧ ಅನಪೇಕ್ಷಿತ ರೀತಿಯಲ್ಲಿ ಕೊನೆಗೊಂಡಿತ್ತು. ಇದೀಗ ಅಲ್ ನಾಸ್ರ್ ಕ್ಲಬ್ ಸೇರಿಕೊಂಡು ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಸಡ್ಡು ಹೊಡೆದಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ತನ್ನ ಮೌಲ್ಯದಲ್ಲಿ ಯಾವ ಕುಸಿತವೂ ಸಂಭವಿಸಿಲ್ಲ ಎಂದು ಮಾಜಿ ಕ್ಲಬ್ ಮುಂದೆ ಸಾರುವಲ್ಲಿಯೂ ರೊನಾಲ್ಡೊ ಯಶಸ್ವಿಯಾಗಿದ್ದಾರೆ.
67 ವರ್ಷಗಳ ಇತಿಹಾಸ ಹೊಂದಿರುವ ಅಲ್ ನಾಸ್ರ್ ಸೌದಿ ಅರೇಬಿಯದ ಅತ್ಯಂತ ಶ್ರೀಮಂತ ಫುಟ್‌ಬಾಲ್ ಕ್ಲಬ್. 9 ಸಲ “ಚಾಂಪಿಯನ್ಸ್ ಲೀಗ್’ ಪ್ರಶಸ್ತಿ ಜಯಿಸಿದೆ. 6 ಸಲ “ಕಿಂಗ್ಸ್ ಕಪ್’, 3 ಸಲ “ಕ್ರೌನ್ ಪ್ರಿನ್ಸೆಸ್ ಕಪ್’, 3 ಸಲ “ಫೆಡರೇಶನ್ ಕಪ್’, 2 ಸಲ “ಸೌದಿ ಸೂಪರ್ ಕಪ್’ ಚಾಂಪಿಯನ್ ಆಗಿ ಮೂಡಿಬಂದ ಹೆಗ್ಗಳಿಕೆ ಈ ಕ್ಲಬ್‌ನದ್ದು. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ 2 ಸಲ ಜಿಸಿಸಿ ಚಾಂಪಿಯನ್ಸ್ ಲೀಗ್, 1998ರಲ್ಲಿ “ಏಷ್ಯನ್ ಕಪ್ ವಿನ್ನರ್ ಕಪ್’ ಮತ್ತು “ಏಷ್ಯನ್ ಸೂಪರ್ ಕಪ್’ ಗೆದ್ದ ಹಿರಿಮೆಯನ್ನೂ ಹೊಂದಿದೆ.