Advertisement
ರೋಗಿಗೆ ಸೋಂಕಿನ ಲಕ್ಷಣಗಳಿದ್ದರೂ ಕೊನೆ ಕ್ಷಣದವರೆಗೂ ಖಾಸಗಿ ಆಸ್ಪತ್ರೆಯವರು ಸರಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿರಲಿಲ್ಲ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಖಾಸಗಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದು ಕ್ರಿಮಿನಲ್ ಆರೋಪದಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಎರಡು ದಿನಗಳು ಆಸ್ಪತ್ರೆ ಬಂದ್ ಮಾಡಿ ಎಲ್ಲ ಸಿಬಂದಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ ಎಂದು ತಿಳಿಸಿದರು. ಇನ್ನಾದರೂ ಖಾಸಗಿ ಆಸ್ಪತ್ರೆಗಳು ರೋಗಿಯಲ್ಲಿ ಕೊರೊನಾ ಲಕ್ಷಣ ಇದ್ದರೆ ಕೂಡಲೇ ಸರಕಾರಿ ಆಸ್ಪತ್ರೆಗೆ ಸೂಚಿಸಿ. ಇನ್ನು ಮೃತ ವೃದ್ಧ ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಹೀಗಾಗಿ ನೂರಾರು ಮಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ಅವರೆಲ್ಲರ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ ಎಂದರು.
ಲಾಕ್‌ಡೌನ್ ಮುಂದುವರಿಸಲು ಮತ್ತು ಇನ್ನಷ್ಟು ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ರಚಿಸಿದ್ದ ಆರೋಗ್ಯ ತಜ್ಞರ ಸಮಿತಿ ವರದಿ ಬಂದಿದ್ದು, ಅಲ್ಲಿನ ಸಲಹೆ ಸೂಚನೆ ಪರಿಶೀಲನೆ ಮಾಡಿ ನಿರ್ಧರಿಸಲಾಗುತ್ತದೆ. ಇಂದಿಗೂ ಕೋವಿಡ್ 19 ಸೋಂಕು ಹೇಗೆ ತಗಲಿದೆ ಎಂದು ಪತ್ತೆಯಾದ ಪ್ರಕರಣಗಳನ್ನು ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು. ಶಂಕಿತರ ಸೋಂಕು ಪರೀಕ್ಷೆ
ನಿಜಾಮುದ್ದೀನ್ ಧಾರ್ಮಿಕ ಸಮಾವೇಶ ಸಂಬಂಧಿಸಿದಂತೆ ಕರ್ನಾಟಕದ 808 ಮಂದಿಯ ಸೋಂಕು ಪರೀಕ್ಷೆ ಮಾಡಿದ್ದೇವೆ. ಇವರನ್ನು ಸರಕಾರಿ ಕ್ವಾರಂಟೈನ್‌ನಲ್ಲಿ ಇರಿಸ ಲಾಗಿದೆ. ರಾಜ್ಯದ 581 ಮಂದಿಯನ್ನು ಹೊರರಾಜ್ಯಗಳಿಗೆ ತೆರಳಿದ್ದು, ಇಂದಿಗೂ ವಾಸಸ್ಥಳಕ್ಕೆ ಮರಳಿಲ್ಲ. ಹೀಗಾಗಿ ಅಲ್ಲಿನ ರಾಜ್ಯಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಇನ್ನು ರಾಜ್ಯ 181ಕೋವಿಡ್ 19 ಸೋಂಕಿತರಲ್ಲಿ 71 ಮಂದಿ ವಿದೇಶಿ ಪ್ರಯಾಣಿಕರು, 110 ಮಂದಿ ಇತರ ಸಂಪರ್ಕಿತರು ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.