Advertisement
ಮುಳ್ಳೇರಿಯ: ಬಾವಿಗೆ ಬಿದ್ದ ಕೋಳಿಯನ್ನು ರಕ್ಷಿಸಲೆಂದು ಇಳಿದ ಯುವಕ ಮೇಲಕ್ಕೇರುತ್ತಿದ್ದಾಗ ಆಯ ತಪ್ಪಿ ಬಿದ್ದು ಸಾವಿಗೀಡಾದ ಘಟನೆ ನೆಟ್ಟಣಿಗೆಯಲ್ಲಿ ನಡೆದಿದೆ.
Related Articles
Advertisement
ಬಸ್‌ನಲ್ಲಿ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 10 ರೂ. ಪತ್ತೆ ; ಕೊಯಿಪ್ಪಾಡಿ ನಿವಾಸಿ ವಶಕ್ಕೆ
ಬದಿಯಡ್ಕ: ಬೆಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಸರಿಯಾದ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ 10 ಲಕ್ಷ ರೂ. ಯನ್ನು ಅಬಕಾರಿ ತಂಡ ಪತ್ತೆಹಚ್ಚಿದ್ದು, ಈ ಸಂಬಂಧ ಕುಂಬಳೆ ಕೊಯಿಪ್ಪಾಡಿ ಕುಚ್ಯಾಳಂದ ಕೆ.ಅಬ್ದುಲ್ ಸಮದ್(35)ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
ಈತನನ್ನು ಹಣ ಸಹಿತ ಆದೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಾಹನ ತಪಾಸಣೆ ಮಾಡುತ್ತಿದ್ದಾಗ ಹಣ ಪತ್ತೆಯಾಯಿತು.
———————————————————————————-
ಮಂಜೇಶ್ವರದ ಚುನಾವಣಾ ತಕರಾರು ಪ್ರಕರಣ : ವಿಚಾರಣೆ ಮುಂದೂಡಿಕೆ
ಕಾಸರಗೋಡು: ಕಳೆದ ಬಾರಿ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲಂಚ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ದಾಖಲಾದ ಪ್ರಕರಣದ ವಿಚಾರಣೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜುಲೈ 11 ಕ್ಕೆ ಮುಂದೂಡಿದೆ.
ಬಿಜೆಪಿ ಅಭ್ಯರ್ಥಿ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸಹಿತ ಬಿಜೆಪಿಯ ಆರು ಮಂದಿ ನೇತಾರರನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸಲಾಗಿದೆ. ಬಿಎಸ್‌ಪಿ ಅಭ್ಯರ್ಥಿ ಕೆ.ಸುಂದರ ಅವರಿಗೆ ಎರಡು ಲಕ್ಷ ರೂ. ನಗದು ಮತ್ತು ಮೊಬೈಲ್ ಫೋನ್ ನೀಡಿ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಯಿತೆಂದು ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆ ಬಳಿಕ ಕ್ರೈಂಬ್ರಾಂಚ್ ವಿಭಾಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
———————————————————————————–
ಹೊಳೆಯಲ್ಲಿ ಮುಳುಗಿ ಬಾಲಕನ ಸಾವು
ಕಾಸರಗೋಡು: ಅರಯಿ ಹೊಳೆಯ ಕಾರ್ತಿಕದಲ್ಲಿ ಸ್ನಾನ ಮಾಡಲು ಇಳಿದ ಕಾಂಞಂಗಾಡ್ ಬಾಂಗೋಡು ಹೊಸ್ ಅರಯಿಲ್ ವಟ್ಟತ್ತೋಡ್‌ನ ಅಬ್ದುಲ್ ಕುಂಞಿ ಬಿ.ಕೆ. ಅವರ ಪುತ್ರ ಮುಹಮ್ಮನ್ ಸಿನಾನ್(16) ಸಾವಿಗೀಡಾದರು. ಜೊತೆಯಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.