ಕಾಸರಗೋಡು: ಕಳವು ಪ್ರಕರಣಕ್ಕೆ ಸಂಬಂಧಿಸಿ ಚೀಮೇನಿಯ ವಾರಂಟ್ ಆರೋಪಿ ಅಖೀಲ್ (28) ಎಂಬಾತನನ್ನು ಚೀಮೇನಿ ಪೊಲೀಸರು ಬಂಧಿಸಿದ್ದಾರೆ.
Advertisement
ಯುವಕನ ಕೊಲೆ: ಇಬ್ಬರು ಕೊಲ್ಲಿಗೆ ಪರಾರಿಮುಳ್ಳೇರಿಯಾ: ಮೀಯಪದವು ಮದಕ್ಕಳ ನಿವಾಸಿ ದಿ|ಅಬ್ದುಲ್ಲ ಅವರ ಪುತ್ರ ಮೊದೀನ್ ಆರಿಫ್ (22) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲು ಬಾಕಿಯಿರುವ ಆರು ಮಂದಿಯ ಪೈಕಿ ಇಬ್ಬರು ಆರೋಪಿಗಳು ಗಲ್ಫ್ ದೇಶಕ್ಕೆ ಪರಾರಿಯಾಗಿದ್ದಾರೆ. ಇತರ ನಾಲ್ವರು ಗೋವಾ ಹಾಗೂ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಮಂಜೇಶ್ವರ ಪೊಲೀಸರು ಶಂಕಿಸಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಮಾ. 4ರಂದು ಕೊಲೆ ಪ್ರಕರಣ ನಡೆದಿತ್ತು.
ಕಾಸರಗೋಡು: ನಗರದ ಐ.ಸಿ.ಭಂಡಾರಿ ರಸ್ತೆಯಲ್ಲಿನ ರಾಜ್ಯ ಬಿವರೇಜ್ ಕಾರ್ಪೊರೇಶನ್‌ನ ಮದ್ಯದಂಗಡಿಯಿಂದ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಳಂಗರೆ ನಿವಾಸಿ ಉಮೈರ್(21)ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಾ.6 ರಂದು ರಾತ್ರಿ ಮದ್ಯದಂಗಡಿಯಿಂದ ಕಳವು ಯತ್ನ ನಡೆದಿತ್ತು. ಆಡು ಕಳವು: ಬಂಧನ
ಕುಂಬಳೆ: ಇಲ್ಲಿನ ಪಿಎಚ್‌ಸಿ ರಸ್ತೆಯ ಅಬ್ಟಾಸ್ ಅವರ ಮನೆಯ ಆಡುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಶಕ್ಕಲ್ಲ ಖಾನ್(23)ನನ್ನು ಕರ್ನಾಟಕದ ಬ್ರಹ್ಮಪುರದಿಂದ ಕರ್ನಾಟಕ ಪೊಲೀಸರ ನೆರವಿನೊಂದಿಗೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
Related Articles
Advertisement
ಹಲ್ಲೆ ಪ್ರಕರಣ : ಕೇಸು ದಾಖಲುಮುಳಿಯಾರು: ಇಲ್ಲಿಗೆ ಸಮೀಪದ ಇರಿಯಣ್ಣಿಯ ಎನ್.ಎಚ್. ರಸ್ತೆಯಲ್ಲಿ ಮಾ.8ರಂದು ಕುತ್ತಿಕೋಲ್ ಬೇತೂರುಪಾರ ಕಾವಿಂಡಡಿ ಹೌಸ್‌ನ ಜಿತೇಶ್ ಕೆ.ಎಚ್. (22) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಳಿಯಾರು ನಿವಾಸಿಗಳಾದ ರಾಜೇಶ್, ಸನಲ್, ಗೋಪು ಕುಟ್ಟನ್ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಾರಾಯಿ ಸಹಿತ ಬಂಧನ
ಬದಿಯಡ್ಕ: ಅಡೂರು ಗ್ರಾಮದ ಪಯರಡ್ಕ- ತಿಮ್ಮಯ್ಯದಿಂದ ಬದಿಯಡ್ಕ ಅಬಕಾರಿ ದಳ ಐದು ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ತಿಮ್ಮಯ್ಯಮೂಲೆಯ ಚಂದ್ರನ್ ಟಿ. (41)ನನ್ನು ಬಂಧಿಸಿದೆ. ಭಜನ ಮಂದಿರದಿಂದ ಕಳವು: ಬಂಧನ
ಅಡೂರು: ಪಾಂಡಿಯ ಭಜನ ಮಂದಿರದಿಂದ ಕಾಣಿಕೆ ಹುಂಡಿ ಕಳವುಗೈದಿದ್ದು, ಸ್ಥಳೀಯರು ಓರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ. ಮಾ.10ರಂದು ರಾತ್ರಿ 9.30ಕ್ಕೆ ಹುಂಡಿ ಕಳವು ಮಾಡಿದ್ದು ಹುಂಡಿಯಲ್ಲಿ ಸುಮಾರು ನಾಲ್ಕು ಸಾವಿರ ರೂ. ಇತ್ತೆನ್ನಲಾಗಿದೆ.