ಕಾಸರಗೋಡು: ಕೆಎಸ್‌ಇಬಿಯ ತಾತ್ಕಾಲಿಕ ಚಾಲಕ ಪಾಲಕುನ್ನಿನ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ. ಕಯ್ಯೂರು ಆಲಂತ್ತಡ್ಕ ನಿವಾಸಿ ಮೆಚ್ಚೇರಿ ಮನೆಯ ಕೆ.ಭಾಸ್ಕರನ್(60) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಕಳವಾಗಿದ್ದ ಮೋಟಾರ್ ಬೈಕ್ ಪತ್ತೆಕಾಸರಗೋಡು: ನಂಬರ್ ಪ್ಲೇಟ್ ಮತ್ತು ಕನ್ನಡಿ ಇಲ್ಲದ ದ್ವಿಚಕ್ರ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಕಳವು ಮಾಡಿದ ಮೋಟಾರ್ ಬೈಕ್ ಪತ್ತೆಯಾಗಿದೆ. ತಳಂಗರೆ ಪಳ್ಳಿಕಾಲ್ ಟಿ. ಉಬೈದ್ ಸ್ಮಾರಕ ಬಸ್ ತಂಗುದಾಣದ ಪರಿಸರದಲ್ಲಿ ಫ್ಯಾಶನ್ ಫ್ಲಾಜ ಬೈಕ್ ಉಪೇಕ್ಷಿಸಿದ ಸ್ಥಿತಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ಮಾಡಿದಾಗ ಈ ಬೈಕ್ ವೆಳ್ಳಿಕೋತ್‌ನ ಅನೀಶ್ ಅವರದೆಂದು ತಿಳಿದು ಬಂದಿದೆ. ಈ ಬೈಕ್ ಅನ್ನು ಕಳವು ಮಾಡಿ ಇಲ್ಲಿ ತಂದಿರಿಸಲಾಗಿತ್ತು. ಮೇ 2ರಂದು ಪುಕುನೋತ್ ಬಾರ ಕ್ಷೇತ್ರ ಪರಿಸರದಿಂದ ಬೈಕ್ ಕಳವು ಮಾಡಲಾಗಿತ್ತು. ಈ ಬಗ್ಗೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ. ನಿರಂತರವಾಗಿ ಕಾಸರಗೋಡು ನಗರದಲ್ಲಿ ದ್ವಿಚಕ್ರ ವಾಹನ ಕಳವಾಗುತ್ತಿರುವುದರಿಂದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ 15ರಷ್ಟು ಆಡುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರರಾದ ಮುಕ್ಕಂಪಾರದ ಮುಹಮ್ಮದ್ ಶಫೀಖ್ ಮತ್ತು ಇಬ್ರಾಹಿಂ ಖಲೀಲ್‌ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಅವರು ಸಂಚರಿಸುತ್ತಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳವು ಮಾಡಿದ ಆಡುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆಲವು ಆಡುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಸಿದ್ದಿಕ್ ಸಾಲತ್ತಡ್ಕನನ್ನು ಬಂಧಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.