Advertisement

Crime News ಕಾಸರಗೋಡು ಅಪರಾಧ ಸುದ್ಧಿಗಳು

12:19 AM Dec 02, 2023 | Team Udayavani |

ಪೋಕ್ಸೋ ಕೇಸಿನ ಆರೋಪಿ ಆತ್ಮಹತ್ಯೆ
ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿ ಅಡೂರು ಚಾಮಕೊಚ್ಚಿ ಮಲ್ಲಂಪಾರೆಯ ದಿನೇಶನ್‌ ಯಾನೆ ಗಣೇಶನ್‌(40) ಚಾಮೆಕೊಚ್ಚಿ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಆತ್ಮಹತ್ಯೆಗೆ ಮುನ್ನ ಪಂಚಾಯತ್‌ ಸದಸ್ಯರಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2022ರಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಆದೂರು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೈಂಗಿಕ ಕಿರುಕುಳ: 189 ವರ್ಷ ಸಜೆ
ಕಾಸರಗೋಡು: ಏಳು ವರ್ಷದ ಬಾಲಕಿ ಹಾಗೂು ಅಪ್ರಾಪ್ತ ವಯಸ್ಕ ಇಬ್ಬರು ಆಕೆಯ ಸಹೋದರರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಳಾಲ್‌ ಅರಿಂಙಲ್‌ನ ಟಿ.ಜಿ. ಸುಧೀಶ್‌ ಆಲಿಯಾಸ್‌ ಪಪ್ಪು(25)ಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯ ವಿವಿಧ ಸೆಕ್ಷನ್‌ಗಳಲ್ಲಿ ಒಟ್ಟು 189 ವರ್ಷ ಸಜೆ ಹಾಗೂ 4.05 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 2 ವರ್ಷ ನಾಲ್ಕು ತಿಂಗಳು ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ಹಾಗೆಯೇ ಶಿಕ್ಷೆಯನ್ನು 50 ವರ್ಷವಾಗಿ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಿದೆ.

ಆಟೋ ಚಾಲಕನ ವಿರುದ್ಧ ಪೋಕ್ಸೋ
ಕುಂಬಳೆ: ಹದಿನೇಳರ ಹರೆಯದಾಕೆಯನ್ನು ಗರ್ಭಿಣಿ ಯನ್ನಾಗಿಸಿದ ಆಟೋರಿಕ್ಷಾ ಚಾಲಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿಗೆ ಕಿರುಕುಳ: ಐದು ವರ್ಷ ಸಜೆ
ಕಾಸರಗೋಡು: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೆರಿಯ ಮಂಡತ್ತಿಕಂಡದ ಸುಂದರನ್‌(62)ಗೆ ಹೊಸದುರ್ಗ ಫಾಸ್ಟ್‌ ಟ್ರ್ಯಾಕ್ ಸ್ಪೆಷಲ್‌ ನ್ಯಾಯಾಲಯ ಐದು ವರ್ಷ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಐದು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

Advertisement

ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿ
ಬದಿಯಡ್ಕ: ದ್ವಿಚಕ್ರ ವಾಹನದಲ್ಲಿ ಬಂದು ಬದಿಯಡ್ಕ ಸಮೀಪದ ಬಾರಡ್ಕ ನಿವಾಸಿ ಬೀಡಿ ಕಾರ್ಮಿಕೆ ರೋಹಿಣಿ (52) ಅವರ ಕತ್ತಿನಿಂದ ಮೂರೂವರೆ ಪವನ್‌ನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮ್ಯಾನೇಜರ್‌ಗೆ ಹಲ್ಲೆ
ಕುಂಬಳೆ: ಖಾಸಗಿ ಹಣಕಾಸು ಸಂಸ್ಥೆಗೆ ನುಗ್ಗಿ ಮ್ಯಾನೇಜರ್‌ ವಿದ್ಯಾನಗರ ಪನ್ನಿಪ್ಪಾರೆ ನಿವಾಸಿ ಜೀವನ್‌(33) ಅವರಿಗೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಅವರನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸ್ಥೆಯ ಮಾಜಿ ನೌಕರ ಹಾಗೂ ಆತನ ಸಹೋದರ ಹಲ್ಲೆ ಮಾಡಿದ್ದಾಗಿ ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next