Advertisement

Crime News;ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

09:11 PM Feb 27, 2024 | Team Udayavani |

ಬೈಕ್‌ ಕಳವು
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದ ಹೊರಗಡೆ ನಿಲುಗಡೆಗೊಳಿಸಿದ ಮಲಪ್ಪುರಂ ನಿವಾಸಿ ಹಾಗೂ ಚೆಮ್ನಾಡ್‌ ಮೇಲ್ಪರಂಬದ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ಸಿರಾಜ್‌ ಅವರ ಬೈಕ್‌ನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಮದ್ಯ ಸಹಿತ ಸ್ಕೂಟರ್‌ ವಶಕ್ಕೆ
ಕಾಸರಗೋಡು: ನಗರದ ಬೀರಂತಬೈಲ್‌ ಲಕ್ಷಿ$¾àವೆಂಕಟೇಶ ರಸ್ತೆ ಬಳಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 6.12 ಲೀಟರ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಡ್ಕತ್ತಬೈಲ್‌ ಅರ್ಜಾಲ್‌ ಹೌಸ್‌ನ ಅನಿಲ್‌ ಕುಮಾರ್‌ ವಿರುದ್ಧ ಕೇಸು ದಾಖಲಿಸಿದೆ.

ಹಲ್ಲೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣದಲ್ಲಿ ಮೇಲ್ಪರಂಬ ನಿವಾಸಿ ಉಬೈದ್‌ (52) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಬಂಧಿಸಿದ ಉಪ್ಪಳ ಕೋಡಿಬೈಲು ನಿಯಾಸ್‌ ಮಂಜಿಲ್‌ನ ನಿಯಾಸ್‌ (33) ಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮಟ್ಕಾ ದಂಧೆ: ಬಂಧನ
ಕಾಸರಗೋಡು: ಪಾಡಿ ಗ್ರಾಮದ ಎಡನೀರು ಬಸ್‌ ನಿಲ್ದಾಣ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಎಡನೀರಿನ ಕೆ. ಕಮಲಾಕ್ಷ (56)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1,080 ರೂ. ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ವಶಕ್ಕೆ
ಕುಂಬಳೆ: ಟಿಪ್ಪರ್‌ ಲಾರಿಯಲ್ಲಿ ಸಾಗಿಸುತ್ತಿದ್ದ ಮರಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಟಿಪ್ಪರ್‌ ಮಾಲಕ ವಳಯಂ ಕೆ.ಕೆ. ಹೌಸಿನ ಆಲಿಕುಂಞಿ (36) ಮತ್ತು ಚಾಲಕ ಕರ್ನಾಟಕ ನಿವಾಸಿ, ಬಾಯಾರಿನಲ್ಲಿ ವಾಸಿಸುವ ಅಬ್ದುಲ್‌ ಮುನೀರ್‌ (23) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.