Advertisement
ಫೈಸಲ್ ನಗರ ನಿವಾಸಿ ತಲ್ಲತ್ ಯಾನೆ ಫೈಸಲ್ ನಗರ ತಲ್ಲಾತ್ (35) ಬಂಧಿತ. ಈ ಹಿಂದೆ ಆಚಿ,ನೌಫಾಲ್, ಅಶ್ಫಾಕ್, ನಿಸಾಕ್, ರಿಫತ್ ಆಲಿ, ರಹೀಮ್ ನ್ನು ಬಂಧಿಸಲಾಗಿತ್ತು.
ಮೂಲತಃ ಕುದ್ರೋಳಿ ನಿವಾಸಿ ಪ್ರಸ್ತುತ ಕೆ.ಸಿ. ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಆರೀಫ್‌ನನ್ನು ಮಂಗಳೂರು ಮೀನಿನ ಧಕ್ಕೆಗೆ ಕೆಲಸಕ್ಕೆಂದು ತೆರಳುವ ಸಂದರ್ಭ ಆರೋಪಿ ತಲ್ಲಾತ್ ನೇತೃತ್ವದ ಏಳು ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ತಲವಾರು ದಾಳಿಗೊಳಗಾದ ಆರೀಫ್ ವಿರುದ್ಧ ಮಂಗಳೂರಿನ ಕಂಕನಾಡಿ, ಬಂದರು ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳಿದ್ದು, ರೌಡಿಶೀಟರ್ ಆಗಿದ್ದಾನೆ. ಆದರೆ ಅಂದು ನಡೆದ ದಾಳಿ ಮೀನಿನ ವ್ಯಾಪಾರ ಸಂಬಂಧಿಸಿದ ಹಣದ ವಿಚಾರಕ್ಕಾಗಿತ್ತು ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿ
ರೌಡಿ ತಲ್ಲಾತ್ ಫರಂಗಿಪೇಟೆ ಡಬ್ಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿಯಾಗಿದ್ದ. ಈತನ ಸಹಚರ ನೌಫಾಲ್ ಯಾನೆ ಟೊಪ್ಪಿ ನೌಫಾಲ್ ಕೂಡ ಫರಂಗಿಪೇಟೆ ಡಬ್ಬಲ್ ಮರ್ಡರ್ ಆರೋಪಿ. ನೌಫಾಲ್ ಚಿಕ್ಕಪ್ಪನಿಗೆ ತಲವಾರು ದಾಳಿಗೊಳಗಾದ ಆರೀಫ್ , 68,000 ರೂ. ಮೀನಿನ ಏಲಂ ವ್ಯವಹಾರದ ಹಣ ನೀಡಬೇಕಿತ್ತು. ಆದರೆ ದೂರವಾಣಿ ಮೂಲಕ ನೌಫಾಲ್ ಹಣ ಕೇಳಿದಾಗ, ಇಬ್ಬರ ನಡುವೆ ಚರ್ಚೆಯುಂಟಾಗಿತ್ತು. ಇದೇ ವೈಷಮ್ಯಕ್ಕೆ ಸಂಬಂಧಿ ಸಿ ತಲ್ಲಾತ್, ನೌಫಾಲ್ ಸಹಿತ ಏಳು ಮಂದಿಯ ತಂಡ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ. ರೌಡಿ ತಲ್ಲಾತ್ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸಹಿತ ಹಲವು ಪ್ರಕರಣಗಳಿವೆ. ಈತ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದಾನೆ.