Advertisement

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

02:02 AM Sep 17, 2024 | Team Udayavani |

ದುಬಾೖ: ಐಸಿಸಿ ವರ್ಷದ ತಿಂಗಳ ಪ್ರಶಸ್ತಿಗಳೆರಡೂ ಈ ಬಾರಿ ಶ್ರೀಲಂಕಾ ಪಾಲಾಗಿದೆ. ದುನಿತ್‌ ವೆಲ್ಲಲಗೆ ಮತ್ತು ಹರ್ಷಿತಾ ಸಮರವಿಕ್ರಮ ಅವರು ಆಗಸ್ಟ್‌ ತಿಂಗಳ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ತಿಂಗಳ ಕ್ರಿಕೆಟಿಗರ ಪ್ರಶಸ್ತಿ ಇತಿಹಾಸದಲ್ಲಿ ಒಂದೇ ದೇಶದ ಕ್ರಿಕೆಟಿಗರು ಆಯ್ಕೆಯಾದ ಕೇವಲ 2ನೇ ನಿದರ್ಶನ ಇದಾಗಿದೆ. ಅದೂ ಒಂದೇ ವರ್ಷದಲ್ಲಿ. ಕಳೆದ ಜೂನ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಮತ್ತು ಸ್ಮತಿ ಮಂಧನಾ ಈ ಗೌರವಕ್ಕೆ ಪಾತ್ರರಾಗಿದ್ದರು.

Advertisement

ದುನಿತ್‌ ವೆಲ್ಲಲಗೆ ಪ್ರವಾಸಿ ಭಾರತದೆ ದುರಿನ ತವರಿನ ಏಕದಿನ ಸರಣಿಯಲ್ಲಿ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 2 ಪಂದ್ಯಗಳಲ್ಲಿ ಅಜೇಯ 67 ಮತ್ತು 39 ರನ್‌ ಜತೆಗೆ 7 ವಿಕೆಟ್‌ ಕೂಡ ಹಾರಿಸಿದ್ದರು. ಅಂತಿಮ ಪಂದ್ಯದಲ್ಲಿ 27ಕ್ಕೆ 5 ವಿಕೆಟ್‌ ಉರುಳಿಸಿದ ಸಾಧನೆ ಇವರದಾಗಿತ್ತು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದವರೆಂದರೆ ಕೇಶವ್‌ ಮಹಾರಾಜ್‌ ಮತ್ತು ಜೇಡನ್‌ ಸೀಲ್ಸ್‌.

ಇದರೊಂದಿಗೆ ಪುರುಷರ ವಿಭಾಗ ದಲ್ಲಿ ಶ್ರೀಲಂಕಾದ ಐವರು ಈ ಪ್ರಶಸ್ತಿಗೆ ಭಾಜನರಾದಂತಾಯಿತು. ಉಳಿದವ ರೆಂದರೆ ಏಂಜೆಲೊ ಮ್ಯಾಥ್ಯೂಸ್‌, ಪ್ರಭಾತ್‌ ಜಯಸೂರ್ಯ, ವನಿಂದು ಹಸರಂಗ ಮತ್ತು ಕಮಿಂಡು ಮೆಂಡಿಸ್‌.
ಹರ್ಷಿತಾ ಸಮರವಿಕ್ರಮ ಅವರು ಐರ್ಲೆಂಡ್‌ ಪ್ರವಾಸದ ವೇಳೆ ಆಡಲಾದ 2 ಟಿ20 ಪಂದ್ಯಗಳಲ್ಲಿ 151 ರನ್‌, 3 ಏಕದಿನ ಪಂದ್ಯಗಳಲ್ಲಿ 172 ರನ್‌ ಹೊಡೆದಿದ್ದರು. ದ್ವಿತೀಯ ಏಕದಿನ ಪಂದ್ಯದಲ್ಲಿ 105 ರನ್‌ ಬಾರಿಸಿದ ಸಾಧನೆ ಇವರದಾಗಿತ್ತು.

ಹರ್ಷಿತಾ ಐಸಿಸಿ ತಿಂಗಳ ಪ್ರಶಸ್ತಿಗೆ ಪಾತ್ರರಾದ ಲಂಕೆಯ ಕೇವಲ 2ನೇ ಆಟಗಾರ್ತಿ. ಚಾಮರಿ ಅತಪಟ್ಟು ಮೊದಲಿಗರು.

Advertisement

Udayavani is now on Telegram. Click here to join our channel and stay updated with the latest news.