Advertisement

ರಾಜ್ಯಸಭೆಯಲ್ಲಿ ಟರ್ಬನೇಟರ್ ಪಂಜಾಬ್ ಪರ ಧ್ವನಿಯಾಗಲಿದ್ದಾರೆ : ಆಪ್

01:48 PM Mar 21, 2022 | Team Udayavani |

ನವದೆಹಲಿ : ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಇತರ ನಾಲ್ವರು ಪ್ರಮುಖ ಸಾಧಕರು ಪಂಜಾಬ್‌ನಿಂದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಸೋಮವಾರ ಸಲ್ಲಿಸಿದ್ದಾರೆ.

Advertisement

”ಬೌಲಿಂಗ್ ದಂತಕಥೆಯಾಗಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ನಂತರ, ಮಿಸ್ಟರ್ ಟರ್ಬನೇಟರ್ ಈಗ ಸಂಸತ್ತಿನಲ್ಲಿ ಪಂಜಾಬ್ ಜನರ ಪರವಾಗಿ ಧ್ವನಿ ಎತ್ತಲಿದ್ದಾರೆ” ಎಂದು ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿದೆ.

41 ರ ಹರೆಯದ ಭಜ್ಜಿ 1998 ರಿಂದ 2016 ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.

ಸಂಜೀವ್ ಅರೋರಾ, ಶಿಕ್ಷಣ ತಜ್ಞ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ, ಡಾ. ಅಶೋಕ್ ಮಿತ್ತಲ್, ಎಎಪಿಯ ಫೈರ್‌ಬ್ರಾಂಡ್ ಯುವ ವಕ್ತಾರ ರಾಘವ್ ಚಡ್ಡಾ , ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್ ಅವರು ಹರ್ಭಜನ್ ಸಿಂಗ್ ಅವರೊಂದಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.

ರಾಜ್ಯ ಸಭೆಯಲ್ಲಿ ಯುವ ಮುಖ

Advertisement

ದೆಹಲಿಯ ರಾಜೇಂದ್ರ ನಗರದ ಶಾಸಕರಾಗಿರುವ ರಾಘವ್ ಚಢಾ ಅವರನ್ನು 2020 ರಲ್ಲಿ ಪಂಜಾಬ್ ಸಹ ಉಸ್ತುವಾರಿಯಾಗಿ ನೇಮಿಸಲಾಯಿತು ಮತ್ತು ಅವರು ಪಂಜಾಬ್‌ನಲ್ಲಿಯೇ ಇದ್ದು, ಎಎಪಿಯ ಕಾರ್ಯತಂತ್ರಗಳ ಮೇಲ್ವಿಚಾರಣೆ ಮಾಡಿ ಅಭೂತಪೂರ್ವ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ರಾಜ್ಯ ಸಭೆಗೆ ಆಯ್ಕೆಯಾಗುವ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಈ ಹಿಂದೆ 35 ನೇ ವಯಸ್ಸಿನಲ್ಲಿ ಮೇರಿ ಕೋಮ್ ಮತ್ತು 34 ನೇ ವಯಸ್ಸಿನಲ್ಲಿ ರಿತಬ್ರತಾ ಬ್ಯಾನರ್ಜಿ ಸಂಸದರಾಗಿದ್ದರು.

ಪ್ರಸ್ತುತ ಸಂಸದರಾಗಿರುವ ಪ್ರತಾಪ್ ಸಿಂಗ್ ಬಾಜ್ವಾ, ಶಂಶೇರ್ ಸಿಂಗ್ ಡುಲ್ಲೋ (ಕಾಂಗ್ರೆಸ್) ಸುಖದೇವ್ ಸಿಂಗ್ ಧಿಂಡ್ಸಾ ಮತ್ತು ನರೇಶ್ ಗುಜ್ರಾಲ್ (ಶಿರೋಮಣಿ ಅಕಾಲಿದಳ), ಶ್ವೈತ್ ಮಲಿಕ್ (ಬಿಜೆಪಿ)ಅವರ ಅವಧಿ ಮುಗಿದಿದೆ. ನಿಯಮಗಳಂತೆ ಏಪ್ರಿಲ್ 9 ರಂದು ತೆರವಾಗಲಿರುವ ಪಂಜಾಬ್‌ನ ರಾಜ್ಯಸಭಾ ಸ್ಥಾನಗಳಿಗೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಐದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ವಿಧಾನಸಭೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳೊಂದಿಗೆ ಆಪ್ ಬಹುಮತವನ್ನು ಹೊಂದಿರುವುದರಿಂದ, ನಾಮನಿರ್ದೇಶಿತ ಐವರೂ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಈ ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next