Advertisement

ಫೇರ್‌ಫಾಕ್ಸ್‌ ವಿರುದ್ಧ ಕ್ರಿಕೆಟಿಗ ಕ್ರಿಸ್‌ಗೇಲ್‌ಗೆ ಜಯ! 

07:20 AM Oct 31, 2017 | Team Udayavani |

ಸಿಡ್ನಿ: ತಂಡದ ಅಂಗಮರ್ದಕಿಗೆ ತಮ್ಮ ಮರ್ಮಾಂಗವನ್ನೇ ಕ್ರಿಕೆಟಿಗ ಕ್ರಿಸ್‌ಗೇಲ್‌ ತೋರಿದ್ದರು ಎಂದು ವರದಿ ಮಾಡಿದ್ದ ಆಸ್ಟ್ರೇಲಿಯಾದ ಫೇರ್‌ ಫಾಕ್ಸ್‌ ಸುದ್ದಿ ಸಂಸ್ಥೆ ಮುಖಭಂಗ ಅನುಭವಿಸಿದೆ. ಈ ಪ್ರಕರಣದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ವಿಂಡೀಸ್  ಕ್ರಿಕೆಟ್‌ ದಂತಕಥೆ ಕ್ರಿಸ್‌ಗೇಲ್‌ ಜಯಗಳಿಸಿದ್ದಾರೆ. ಆದರೆ ಫೇರ್‌ ಫಾಕ್ಸ್‌ಗೆ ಶಿಕ್ಷೆಯ ಪ್ರಮಾಣ ಏನೆಂದು ಇನ್ನೂ ಖಚಿತವಾಗಿಲ್ಲ.

Advertisement

ಆಗಿದ್ದೇನು?: 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕ್ರಿಕೆಟ್‌ ವಿಶ್ವಕಪ್‌ ವೇಳೆ, ಆಹಾರ ಹುಡುಕಿಕೊಂಡು ಅಂಗಮರ್ದಕಿ
ವಿಂಡೀಸ್‌ ಡ್ರೆಸ್ಸಿಂಗ್‌ ಕೊಠಡಿಗೆ ತೆರಳಿದ್ದರು. ಆಗ ಬರೀ ಟವೆಲ್‌ನಲ್ಲಿದ್ದ ಗೇಲ್‌ ತಮ್ಮ ಟವೆಲ್‌ ಬಿಚ್ಚಿ, ನೀನು ಹುಡುಕುತ್ತಿರುವುದು ಇದು ತಾನೆ ಎಂದು ಮರ್ಮಾಂಗವನ್ನು ತೋರಿದ್ದರಂತೆ. ಹೀಗೆಂದು ಫೇರ್‌ಫಾಕ್ಸ್‌ 2016ರಲ್ಲಿ ವರದಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗೇಲ್‌, ಇದು ತನ್ನ ವರ್ಚಸ್ಸನ್ನು ಹಾಳು ಮಾಡಲು ಫೇರ್‌ಫಾಕ್ಸ್‌ ನಡೆಸಿರುವ ಯತ್ನ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಗೇಲ್‌ ಪರವಾಗಿ ಸಾಕ್ಷಿ ನುಡಿದ ಡ್ವೇನ್‌ ಸ್ಮಿತ್‌, ಪ್ರಕರಣ ಶುದ್ಧ ಸುಳ್ಳು ಎಂದಿದ್ದಾರೆ. ಸ್ಮಿತ್‌ ಅದೇ ಸಮಯದಲ್ಲಿ ಸ್ಥಳದಲ್ಲಿದ್ದರು ಎಂದು ಅಂಗಮರ್ದಕಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next