Advertisement

ಬೆನ್‌ ಸ್ಟೋಕ್ಸ್‌ ತಪ್ಪು ಮಾಡಿಲ್ಲ, ಎದುರಾಳಿಯೂ ತಪ್ಪಿತಸ್ಥನಲ್ಲ!

06:00 AM Aug 16, 2018 | |

ಲಂಡನ್‌: ನೈಟ್‌ ಬಾರ್‌ ಹೊಡೆದಾಟ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ನಿರ್ದೋಷಿಯೆಂದು ಸಾಬೀತಾಗಿದೆ. ಇದರಿಂದ ಅವರನ್ನು ಭಾರತ ವಿರುದ್ಧದ 3ನೇ ಟೆಸ್ಟ್‌ಗೆ ಆಯ್ಕೆ ಮಾಡಲಾಗಿದೆ. ವಿಚಿತ್ರವೆಂದರೆ, ಬೆನ್‌ ಸ್ಟೋಕ್ಸ್‌ ಅಪರಾಧಿಯಲ್ಲ, ಅವರ ವಿರುದ್ಧ ದೂರು ದಾಖಲಿಸಿದ್ದ ರ್ಯಾನ್‌ ಅಲಿ, ರ್ಯಾನ್‌ ಹೇಲ್‌ ಕೂಡ ತಪ್ಪಿತಸ್ಥರಲ್ಲವೆಂದು ಬ್ರಿಸ್ಟಲ್‌ ಕ್ರೌನ್‌ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದು ಹೇಗೆಂದು ಮಾತ್ರ ಯಾರಿಗೂ ಅರ್ಥವಾಗಿಲ್ಲ!

Advertisement

7 ದಿನಗಳ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಟೋಕ್ಸ್‌ ವಿರುದ್ಧ ಪ್ರಕರಣ ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. ಹಾಗೆಯೇ ತಪ್ಪಿತಸ್ಥರೆಂದು ಘೋಷಿಸಲೂ ಒಪ್ಪಲಿಲ್ಲ. ಕಡೆಗೂ ವಿಚಾರಣೆಯ ಅನಂತರ ಸ್ಟೋಕ್ಸ್‌ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲವೆಂದು ನ್ಯಾಯಾಲಯ ಹೇಳಿತು. ಆದರೆ ಅವರ ವಿರುದ್ಧ ನಿಂತಿದ್ದ ರ್ಯಾನ್‌ ಅಲಿಯನ್ನೂ ನಿರಪರಾಧಿಯೆಂದು ಬಿಡುಗಡೆ ಮಾಡಿತು! ಈ ವಿಚಿತ್ರ ಎಲ್ಲರನ್ನೂ ತಬ್ಬಿಬ್ಟಾಗಿಸಿದರೆ, ರ್ಯಾನ್‌ ಅಲಿ ಪತ್ನಿ ಮಾತ್ರ ಅತ್ತರು. ನ್ಯಾಯಾಲಯದ ತೀರ್ಪು ನೋಡಿದರೆ ಇಬ್ಬರೂ ವ್ಯಕ್ತಿಗಳು ಕುಡಿತದ ಅಮಲಿನಲ್ಲಿ ಪರಸ್ಪರ ಜಗಳ ಮಾಡಿಕೊಂಡಿರುವಂತೆ ಕಾಣುತ್ತಿದೆ. ಆದ್ದರಿಂದಲೇ ಇಬ್ಬರನ್ನೂ ಬಿಡುಗಡೆ ಮಾಡುವ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next