Advertisement
ಬಿಸಿಸಿಐ ವಾರ್ಷಿಕ ಗುತ್ತಿಗೆ ವ್ಯಾಪ್ತಿಯಲ್ಲಿ ಬರುವ 27 ಕ್ರಿಕೆಟಿ ಗರಿಗೆ ಒಟ್ಟು 99 ಕೋಟಿ ರೂ. ನೀಡಬೇಕಾಗಿದೆ. ಇದಿನ್ನೂ ಲಭ್ಯವಾಗಿಲ್ಲ, ಅಲ್ಲದೇ ಯಾವಾಗ ಸಿಗುತ್ತದೆ ಎನ್ನುವುದೂ ಖಾತ್ರಿಯಾಗಿಲ್ಲ.
Related Articles
ಬರೀ ವೇತನ ಮಾತ್ರವಲ್ಲ, ಆಟಗಾರರಿಗೆ ಪ್ರತೀ ಪಂದ್ಯದ ಬಳಿಕ ನೀಡುವ ಶುಲ್ಕವೂ ಪಾವತಿಯಾಗಿಲ್ಲ. ಸದ್ಯ ಬಿಸಿಸಿಐ ಲೆಕ್ಕಾಚಾರದಲ್ಲಿ ಟೆಸ್ಟ್‌ಗೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ., ಟಿ20ಗೆ 3 ಲಕ್ಷ ರೂ. ನೀಡಬೇಕು. 2019 ಡಿಸೆಂಬರ್‌ನಿಂದ ಭಾರತದ ಪರ 2 ಟೆಸ್ಟ್, 9 ಏಕದಿನ, 8 ಟಿ20 ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಹಣ ಪಾವತಿಯಾಗಿಲ್ಲ.
Advertisement
ಯಾಕೆ ಈ ವಿಳಂಬ?ಬಿಸಿಸಿಐ ಹೀಗೆ ವಿಳಂಬ ಮಾಡುವುದಕ್ಕೆ ಕಾರಣವೇ ಇಲ್ಲ. ಮೂಲಗಳ ಪ್ರಕಾರ, ಕಳೆದ ಡಿಸೆಂಬರ್‌ನಿಂದ ಬಿಸಿಸಿಐ ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ (ಸಿಎಫ್ಒ) ಇಲ್ಲ. ಕಳೆದ ತಿಂಗಳಿಂದ ಸಿಇಒ ಹಾಗೂ ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥರೂ ಇಲ್ಲ. ಅಷ್ಟು ಮಾತ್ರವಲ್ಲ, ಜು. 27ರಿಂದ ತಾಂತ್ರಿಕವಾಗಿ ಸೌರವ್ ಗಂಗೂಲಿ ಹಾಗೂ ಜಯ್ ಶಾ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನದಲ್ಲಿಲ್ಲ. ಇವೆಲ್ಲವೂ ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಬಿಸಿಸಿಐಗೆ ಹಣದ ಕೊರತೆಯಿಲ್ಲ
ಸದ್ಯ ಕ್ರಿಕೆಟ್ ಚಟುವಟಿಕೆ ನಡೆಯದಿದ್ದರೂ ಬಿಸಿಸಿಐಗೆ ಹಣದ ಕೊರತೆಯೇನಿಲ್ಲ. ಅದರ ಬಳಿ ದಂಡಿಯಾಗಿ ಹಣವಿದೆ. 2018 ಮಾರ್ಚ್ ನಲ್ಲಿ ಬಿಸಿಸಿಐ ಬ್ಯಾಂಕ್ ಖಾತೆಯಲ್ಲಿ 5,526 ಕೋಟಿ ರೂ. ಹಣವಿತ್ತು. ಇದರಲ್ಲಿ 2,992 ಕೋಟಿ ರೂ. ನಿಗದಿತ ಠೇವಣಿಯೂ ಸೇರಿದೆ. ಇಷ್ಟಲ್ಲದೇ 2018ರಲ್ಲೇ ಸ್ಟಾರ್ ಟಿವಿ ಜತೆಗೆ ಬಿಸಿಸಿಐ 5 ವರ್ಷಗಳ ನೇರಪ್ರಸಾರ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಮೊತ್ತವೇ 6,138.1 ಕೋಟಿ ರೂ. ಐಪಿಎಲ್ ನೇರಪ್ರಸಾರದಿಂದ ಬರುವ ಮೊತ್ತವೂ ಬೃಹತ್ ಪ್ರಮಾಣದಲ್ಲೇ ಇದೆ.