Advertisement

Cricket World Cup; 8 ನಾಯಕರಿಗೆ ಮೊದಲ ನಂಟು

11:32 PM Oct 04, 2023 | Team Udayavani |

ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು 10. ಇವುಗಳಲ್ಲಿ 8 ನಾಯಕರು ಮೊದಲ ಸಲ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇವಲ ಇಬ್ಬರು ಮಾತ್ರ ಹಿಂದಿನವರೇ ಆಗಿದ್ದಾರೆ. ಇವರೆಂದರೆ ನ್ಯೂಜಿಲ್ಯಾಂಡ್‌ನ‌ ಕೇನ್‌ ವಿಲಿಯಮ್ಸನ್‌ ಮತ್ತು ಬಾಂಗ್ಲಾದೇಶದ ಶಕಿಬ್‌ ಅಲ್‌ ಹಸನ್‌.

Advertisement

ಇವರಲ್ಲಿ ಶಕಿಬ್‌ ಅಲ್‌ ಹಸನ್‌ ಕತೆ ಬಹಳ ಸ್ವಾರಸ್ಯಕರ. 2019ರಲ್ಲಿ ಬಾಂಗ್ಲಾವನ್ನು ಮುನ್ನಡೆಸಿದವರು ಮಶ್ರಫೆ ಮೊರ್ತಜಾ. ಆದರೆ 2011ರ ಕೂಟದಲ್ಲಿ ಶಕಿಬ್‌ ಬಾಂಗ್ಲಾ ಸಾರಥಿಯಾಗಿದ್ದರು. ಅಂದಿನ ಪಂದ್ಯಾವಳಿ ಕೂಡ ಭಾರತದ ಆತಿಥ್ಯದಲ್ಲೇ ಸಾಗಿತ್ತು.
ಹಾಗೆಯೇ ನೆದರ್ಲೆಂಡ್ಸ್‌ 2011ರ ಬಳಿಕ ಮೊದಲ ಸಲ ವಿಶ್ವಕಪ್‌ ಆಡಲಿಳಿಯುತ್ತಿದೆ. ಅಂದು ಪೀಟರ್‌ ಬೋರೆನ್‌ ನಾಯಕರಾಗಿದ್ದರು. 12 ವರ್ಷಗಳ ಬಳಿಕ ಸ್ಲಾಟ್‌ ಎಡ್ವರ್ಡ್ಸ್‌ ನಾಯಕತ್ವದಲ್ಲಿ ಭಾರತಕ್ಕೆ ಆಗಮಿಸಿದೆ.

ನೂತನ ನಾಯಕರು
ಭಾರತ: ರೋಹಿತ್‌ ಶರ್ಮ (2019: ವಿರಾಟ್‌ ಕೊಹ್ಲಿ)
ಆಸ್ಟ್ರೇಲಿಯ: ಪ್ಯಾಟ್‌ ಕಮಿನ್ಸ್‌ (2019: ಆರನ್‌ ಫಿಂಚ್‌)
ಇಂಗ್ಲೆಂಡ್‌: ಜಾಸ್‌ ಬಟ್ಲರ್‌ (2019: ಇಯಾನ್‌ ಮಾರ್ಗನ್‌)
ದಕ್ಷಿಣ ಆಫ್ರಿಕಾ: ಟೆಂಬ ಬವುಮ (2019: ಫಾ ಡು ಪ್ಲೆಸಿಸ್‌)
ಪಾಕಿಸ್ಥಾನ: ಬಾಬರ್‌ ಆಜಂ (2019: ಸರ್ಫರಾಜ್‌ ಅಹ್ಮದ್‌)
ಶ್ರೀಲಂಕಾ: ದಸುನ್‌ ಶಣಕ (2019: ದಿಮುತ್‌ ಕರುಣಾರತ್ನೆ)
ಅಫ್ಘಾನಿಸ್ಥಾನ: ಹಶ್ಮತುಲ್ಲ ಶಾಹಿದಿ (2019: ಗುಲ್ಬದಿನ್‌ ನೈಬ್‌)
ನೆದರ್ಲೆಂಡ್ಸ್‌: ಸ್ಕಾಟ್‌ ಎಡ್ವರ್ಡ್ಸ್‌ (2011: ಪೀಟರ್‌ ಬೋರೆನ್‌)

Advertisement

Udayavani is now on Telegram. Click here to join our channel and stay updated with the latest news.

Next