Advertisement

ಕ್ಷೇತ್ರದ ಪ್ರತಿಭಾವಂತರ ಪ್ರೋತ್ಸಾಹಕ್ಕಾಗಿ ಕ್ರೀಡಾಕೂಟ

04:15 PM May 09, 2022 | Team Udayavani |

ಶಿಡ್ಲಘಟ್ಟ: ಪ್ರತಿಭಾವಂತರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂಬ ಆಸೆಯಿಂದ ಕ್ಷೇತ್ರದಲ್ಲಿ ಕ್ರೀಡಾ ಚಟುವಟಿಕೆ ಹೆಚ್ಚಾಗಿ ನಡೆಸಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡ, ಎಬಿಡಿ ಗ್ರೂಪ್‌ ಅಧ್ಯಕ್ಷ ರಾಜೀವ್‌ಗೌಡ ತಿಳಿಸಿದರು.

Advertisement

ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಎಬಿಡಿ ಗ್ರೂಪ್‌ ಆಯೋಜಿಸಿದ್ದ ಹೋಬಳಿವಾರು ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಯುವಕರಲ್ಲಿ ಒಂದೆಲ್ಲಾ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸಂಘ ಸಂಸ್ಥೆಗಳು ಮಾಡಬೇಕು. ಈ ನಿಟ್ಟಿನಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕ್ರಿಕೆಟ್‌, ಕಬಡ್ಡಿ, ವಾಲಿಬಾಲ್‌, ಫ‌ುಟ್‌ಬಾಲ್‌ ಮುಂತಾದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಕಲ್ಪಿಸುವ ಜೊತೆಗೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶ ನೀಡಲಾಗುತ್ತದೆ ಎಂದು ವಿವರಿಸಿದರು.

ದೈಹಿಕ ಕಸರತ್ತು ಮಾಡಿ: ಯುವಕರು ಮಾನಸಿಕ, ದೈಹಿಕವಾಗಿ ಆರೋಗ್ಯ ಪಡೆಯಲು ಕ್ರೀಡೆಗಳು ಜೀವ ನದಲ್ಲಿ ಬಹಳ ಅವಶ್ಯಕ. ಯುವಕರು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು ಎಂದು ತಿಳಿಸಿದರು.

ಟೂರ್ನಮೆಂಟ್‌ ಆಯೋಜನೆ: ಅಲ್ಲದೆ, ಹೋಬಳಿ ಮಟ್ಟದ ಟೂರ್ನಮೆಂಟ್‌ ಅನ್ನು ಮೊದಲ ಬಾರಿಗೆ ಜಂಗಮಕೋಟೆಯಿಂದ ಪ್ರಾರಂಭ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಟೂರ್ನ ಮೆಂ ಟ್‌ ಆಯೋಜಿಸ ಲಾಗುವುದು ಎಂದು ವಿವರಿಸಿದರು.

Advertisement

ಚೆನ್ನಾಗಿ ಓದಿ: ಇಂದಿನ ಪರಿಸ್ಥಿತಿಯಲ್ಲಿ ಹಲವು ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟ ಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸು ಇಟ್ಟುಕೊಂಡಿರುತ್ತಾರೆ. ತಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳುವ ಗುರಿ ಯುವ ಕರು ಹೊಂದಿರಬೇಕು. ವಿದ್ಯಾರ್ಥಿಗಳು ಓದದೇ ಅನುತ್ತೀ ರ್ಣಗೊಂಡು, ಅರ್ಧಕ್ಕೆ ಶಿಕ್ಷಣ ಬಿಡು ತ್ತಿ ರುವುದು ಆತಂಕಕಾರಿ ಬೆಳವಣಿಗೆ. ಉಜ್ವಲ ಭವಿ ಷ್ಯಕ್ಕಾಗಿ ಚೆನ್ನಾಗಿ ಓದಬೇಕು ಎಂದು ಸಲಹೆ ನೀಡಿದರು.

ಪ್ರತಿಭೆ ಪ್ರದರ್ಶಿಸಿ: ಯುವಕರು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆ, ಆಟೋಟ ಗಳಲ್ಲಿ ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು. ತಾಲೂಕು ಮಟ್ಟದ ಪ್ರಥಮ ಬಹುಮಾನ ಐದು ಲಕ್ಷ ರೂ., ಹೋಬಳಿ ಮಟ್ಟದಲ್ಲಿ 5 ಸಾವಿರ ರೂ. ಬಹುಮಾನ ನೀಡುತ್ತಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವವರೆಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದರು.

ಹಿರಿಯರಾದ ವರದಣ್ಣ, ಫಯಾಜ್‌, ನಯೀಮ್‌, ನಾರಾಯಣಸ್ವಾಮಿ(ಬಂಗಾರಪ್ಪ), ಯಣ್ಣೂರು ಮಂಜಣ್ಣ, ಹಿರೇಬಲ್ಲ ಕೃಷ್ಣಪ್ಪ, ಜಂಗಮಕೋಟೆ ಚಂದ್ರಣ್ಣ, ಹರೀಶ್‌, ಅಪ್ಪೆಗೌಡನಹಳ್ಳಿ ಮಂಜುನಾಥ್‌, ಮುನಿರಾಜು(ಕುಟ್ಟಿ ), ಆನೂರು ರವಿ, ಸುದರ್ಶನ್‌ ಗೌಡ, ನರೇಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next