Advertisement

ಕ್ರಿಕೆಟ್‌ನಿಂದ ಭಾರತ-ಪಾಕ್‌ ಬಾಂಧವ್ಯ ಸುಧಾರಣೆ: ಅಫ್ರಿದಿ

06:30 AM Feb 20, 2018 | Team Udayavani |

ಇಸ್ಲಾಮಾಬಾದ್‌: ಕ್ರಿಕೆಟ್‌ನಿಂದ ಭವಿಷ್ಯದಲ್ಲಿ ಭಾರತ-ಪಾಕಿಸ್ಥಾನ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೊಳ್ಳಲು ಸಾಧ್ಯ ಎಂದು ಪಾಕಿಸ್ಥಾನದ ಮಾಜಿ ಆಟಗಾರ ಶಾಹಿದ್‌ ಅಫ್ರಿದಿ ಹೇಳಿದ್ದಾರೆ.

Advertisement

ಇತ್ತೀಚೆಗೆ ಸ್ವಿಜರ್‌ಲ್ಯಾಂಡಿನಲ್ಲಿ ನಡೆದ ಸೇಂಟ್‌ ಮಾರಿಟ್ಜ್  ಐಸ್‌ ಕ್ರಿಕೆಟ್‌ ಸಂದರ್ಭದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿದ ಅಫ್ರಿದಿ, “ಇತ್ತಂಡಗಳ ನಡುವಿನ ಅಂತಾರಾಷ್ಟ್ರೀಯ ಪಂದ್ಯಗಳ ಕೊರತೆಯ ಕಾರಣ ನಾವು ಐಸ್‌ ಕ್ರಿಕೆಟ್‌ನಲ್ಲಿ ಪಾಲ್ಗೊಂಡು ಸಂಭ್ರಮಿಸಿದೆವು. ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಎರಡೂ ತಂಡಗಳ ಮಧ್ಯೆ ಕ್ರಿಕೆಟ್‌ ಆಟಕ್ಕೆ ಅನುವು ನೀಡಿದರೆ ಭಾರತ-ಪಾಕ್‌ ನಡುವಿನ ಬಿಗುವಿನ ಸ್ಥಿತಿ ನಿವಾರಣೆಗೊಳ್ಳುವ ಸಾಧ್ಯತೆಗಳಿವೆ’ ಎಂದಿದ್ದಾರೆ.

ಸೌಹಾರ್ದ ಐಸ್‌ ಕ್ರಿಕೆಟ್‌ ಪಂದ್ಯದಲ್ಲಿ  ಅಫ್ರಿದಿ ರಾಯಲ್ಸ್‌  ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಮಾಜಿ ಆಟಗಾರ ವಿರೇಂದ್ರ ಸೆಹವಾಗ್‌ ಪ್ಯಾಲೆಸ್‌ ಡೈಮಂಡ್‌ ತಂಡವನ್ನು ಮುನ್ನಡೆಸಿದ್ದರು. ಈ ಸಂದರ್ಭ ಪಾಕಿಸ್ಥಾನವನ್ನು ಅಬ್ದುಲ್‌ ರಜಾಕ್‌, ಶೋಯಿಬ್‌ ಅಖ್ತರ್‌ ಅವರಂಥ ಮಾಜಿ ಸ್ಟಾರ್‌ ಆಟಗಾರರು ಪ್ರತಿನಿಧಿಸಿದ್ದರೆ, ಭಾರತ ಪರ ಮೊಹಮ್ಮದ್‌ ಕೈಫ್, ಜಹೀರ್‌ ಖಾನ್‌, ರಮೇಶ್‌ ಪೊವಾರ್‌, ಅಜಿತ್‌ ಅಗರ್ಕರ್‌, ಜೋಗಿಂದರ್‌ ಶರ್ಮ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next