Advertisement

ಕ್ರಿಕೆಟ್‌ ಮಂಡಳಿ ನೂತನ ಸಂವಿಧಾನಕ್ಕೆ ತಿದ್ದುಪಡಿ?

09:57 AM Nov 12, 2019 | Team Udayavani |

ಮುಂಬಯಿ: ಬಿಸಿಸಿಐ ಸಂವಿಧಾನವನ್ನೇ ಬದಲಿಸಿ ಹೊಸರೂಪ ಕೊಟ್ಟಿದ್ದ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಪರಿಶ್ರಮ ವ್ಯರ್ಥವಾಗಲಿÊದೆಯೇ? ಅಂಥದೊಂದು ಸಾಧ್ಯತೆಯಿದೆಯೆಂಬ ಗುಮಾನಿ ಇದೀಗ ಶುರುವಾಗಿದೆ. ಸೌರವ್‌ ಗಂಗೂಲಿ ನೇತೃತ್ವದಲ್ಲಿ ಬಿಸಿಸಿಐ ಆಡಳಿತಕ್ಕೇರಿರುವ ಹೊಸ ತಂಡ ಹಲವು ಪ್ರಮುಖ ಸಾಂವಿಧಾನಾತ್ಮಕ ಬದಲಾವಣೆಗಳಿಗೆ ತಿದ್ದುಪಡಿ ಮಾಡಲು ಚಿಂತಿಸಿದೆ ಎಂದು ವರದಿಯಾಗಿಗಿದೆ.

Advertisement

ಒಂದು ವೇಳೆ ಈ ರೀತಿಯ ಬದಲಾವಣೆ ಸಾಧ್ಯವಾದರೆ; ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನದಿಂದ ಮುಂದಿನ 9 ತಿಂಗಳಲ್ಲಿ ಹೊರಬೀಳುವ ಭೀತಿಯಲ್ಲಿರುವ ಸೌರವ್‌ ಗಂಗೂಲಿ ಮತ್ತು ಜಾಯ್‌ ಶಾಗೆ 3 ವರ್ಷ ಪೂರ್ಣಾವಧಿ ಅಧಿಕಾರ ನಡೆಸಲು ಅವಕಾಶವಾಗಲಿದೆ.

ಡಿ. ಒಂದರಂದು ನಡೆಯಲಿರುವ ಬಿಸಿಸಿಐಯ 88ನೇ ಸರ್ವಸದಸ್ಯರ ಸಭೆಯಲ್ಲಿ ಈ ಸಂಬಂಧ ನೂತನ ಕಾರ್ಯದರ್ಶಿ ಜಾಯ್‌ ಶಾ 12 ಅಂಶಗಳ ಪಟ್ಟಿಯನ್ನು ಮಂಡಿಸಲಿದ್ದಾರೆ.

ಸುಪ್ರೀಂ ಅನುಮತಿ ಬೇಕಿಲ್ಲ
ಬಿಸಿಸಿಐ ಪರಿಷ್ಕೃತ ಸಂವಿಧಾನದಲ್ಲೇನಿದೆ?: ಬಿಸಿಸಿಐ ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ಮಾಡಲು ಸರ್ವಸದಸ್ಯರ ಸಭೆಯಲ್ಲಿ 4ರಲ್ಲಿ 3ರಷ್ಟು ಬೆಂಬಲ ಬೇಕು. ಅಷ್ಟಾದ ಮೇಲೂ ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಅಂತಿಮ ಅಂಕಿತ ಹಾಕಬೇಕು.

ಹೊಸ ಆಡಳಿತದ ಬಯಕೆಗಳೇನು?: ಲೋಧಾ ಸಮಿತಿ ಶಿಫಾರಸಿನಲ್ಲಿ ಈ ರೀತಿಯ ನಿಯಮಗಳಿರಲಿಲ್ಲ. ಅಷ್ಟಲ್ಲದೇ ಸರ್ವೋಚ್ಚ ನ್ಯಾಯಾಲಯ ಜು.18, 2016ರಂದು ನೀಡಿದ ತೀರ್ಪಿನಲ್ಲೂ ಈ ಬಗ್ಗೆ ಉಲ್ಲೇಖಗಳಿಲ್ಲ. ಪ್ರತೀ ಬಾರಿಯೂ ಸಂವಿಧಾನಕ್ಕೆ ಬದಲಾವಣೆ ಮಾಡಿ ಅದನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಮಂಡಿಸುವುದು ಪ್ರಾಯೋಗಿಕವಲ್ಲ. ಆದ್ದರಿಂದ ಬಿಸಿಸಿಐಯ ಸಾಂವಿಧಾನಿಕ ಬದಲಾವಣೆಗೆ ನ್ಯಾಯಾಲಯದ ಅನುಮತಿ ಅಗತ್ಯವಿಲ್ಲ.

Advertisement

3 ವರ್ಷಗಳ ವಿಶ್ರಾಂತಿ ನಿಯಮ ಬದಲು?
ಈ ಕಡ್ಡಾಯ ವಿಶ್ರಾಂತಿ ನಿಯಮ ಉತ್ತಮ ಆಡಳಿತಕ್ಕೆ ಒಂದು ತಡೆಯಾಗಿದೆ. ಯೋಗ್ಯವ್ಯಕ್ತಿಗಳು ಬಿಸಿಸಿಐಯನ್ನು ಮುನ್ನಡೆಸುವುದಕ್ಕೆ ಅಡ್ಡಿಯಾಗುತ್ತದೆ. ಈ ನಿಯಮ ಒಬ್ಬ ವ್ಯಕ್ತಿ ಒಂದೇ ಸಂಸ್ಥೆಯಲ್ಲಿ ಸತತ 6 ವರ್ಷ ಅಧಿಕಾರ ನಡೆಸಿದ್ದರೆ ಮಾತ್ರ ಅನ್ವಯ ವಾಗಬೇಕು. ಎರಡೂ ಸಂಸ್ಥೆಗಳಲ್ಲಿ ನಡೆಸಿದ ಅಧಿ ಕಾರವನ್ನು ಕೂಡಿಸಿ ನಿರ್ಧರಿಸಬಾರದು. ಅಲ್ಲದೇ ಬಿಸಿಸಿಐ ಖಜಾಂಚಿ, ಜಂಟಿ ಕಾರ್ಯದರ್ಶಿ, ಉಪಾ ಧ್ಯಕ್ಷರಿಗೆ ಸತತ 9 ವರ್ಷ ಅಧಿಕಾರದಲ್ಲಿ ಮುಂದು ವರಿಯುವುದಕ್ಕೆ ಅವಕಾಶ ನೀಡಬೇಕು. ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಸತತ 6 ವರ್ಷ ಅಧಿಕಾರದಲ್ಲಿ‌ಬೇಕು ಎಂಬುದು ಆಶಯ.

Advertisement

Udayavani is now on Telegram. Click here to join our channel and stay updated with the latest news.

Next