Advertisement

ಕ್ರಿಕೆಟ್‌ ಬೆಟ್ಟಿಂಗ್‌: ಸಿಸಿಬಿಯಿಂದ ಮೂವರ ಬಂಧನ

12:14 PM Oct 29, 2021 | Team Udayavani |

ಬೆಂಗಳೂರು: ಆ್ಯಪ್ಮತ್ತು ವೆಬ್ಸೈಟ್ಗಳ ಮೂಲಕ ಕ್ರಿಕೆಟ್ಬೆಟ್ಟಿಂಗ್ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ಓಂಪ್ರಕಾಶ್‌(28), ಸತ್ವಾಲ್‌ ಸಿಂಗ್‌(27) ಮತ್ತು ಗೇವರ್‌ ಚಂದ್‌(30) ಬಂಧಿತರು. ಆರೋಪಿಗಳಿಂದ ಮೂರು ಮೊಬೈಲ್‌ಗಳು, 3.50 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಮೂವರ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಆರೋಪಿಗಳು .26ರಂದು ನಡೆದ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್‌, ಸೌತ್‌ ಆಫ್ರಿಕಾ ಮತ್ತು ವೆಸ್ಟ್‌ ಇಂಡಿಸ್‌ ತಂಡಗಳ ಕ್ರಿಕೆಟ್‌ ಪಂದ್ಯಗಳು ಮತ್ತು .17ರಂದು ನಡೆದ ಇಂಗ್ಲೆಂಡ್  ಮತ್ತು ಬಾಂಗ್ಲಾದೇಶ, ಸ್ಕಾಟ್‌ಲ್ಯಾಂಡ್‌ ಮತ್ತು ನಮೀಬಿಯಾ ತಂಡಗಳ ಕ್ರಿಕೆಟ್‌ ಪಂದ್ಯಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಆ್ಯಪ್‌/ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್‌ ರೇಶ್ಯೂವನ್ನು ನೋಡಿಕೊಂಡು ಮೊಬೈಲ್‌, ವ್ಯಾಟ್ಸ್‌ಆ್ಯಪ್‌ ಮೂಲಕ ಸೋಲುಗೆಲುವಿನ ಆಟ ಆಡು ತ್ತಿದ್ದರು. ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಆರೋಪಿಗಳು ಲಾರ್ಡ್ಸ್ ಎಕ್ಸ್‌ಚೆಂಜ್‌.ಕಾಂ, ಜೆಟ್‌ ಎಕ್ಸ್‌ಚೆಂಜ್‌9. ಕಾಂ, ಸ್ಕೈ ಎಕ್ಸ್‌ಚೆಂಜ್‌.ಕಾಂ ಎಂಬ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next