Advertisement

ಮೈ ತುಂಬ ಬಟ್ಟೆ ತೊಟ್ಟರೆ ಶ್ರೇಯಸ್ಸು: ಸಲ್ಮಾನ್‌ ಖಾನ್‌

11:03 PM Apr 30, 2023 | Team Udayavani |

ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ಶೂಟಿಂಗ್‌ನಲ್ಲಿ ಹೆಣ್ಣುಮಕ್ಕಳ ತುಂಡು ಉಡುಗೆ ಇಷ್ಟಪಡುವುದಿಲ್ಲ. ಎಲ್ಲರಿಗೂ ಮೈ ತುಂಬಾ ಬಟ್ಟೆತೊಡಲು ತಿಳಿಸುತ್ತಾರೆ ಎಂದು ಇತ್ತೀಚೆಗಷ್ಟೇ ನಟಿ ಪಲಕ್‌ ತಿವಾರಿ ಹೇಳಿಕೆ ನೀಡಿದ್ದು, ಈ ವೀಡಿಯೋ ಭಾರೀ ವೈರಲ್‌ ಆಗಿತ್ತು. ಇದೀಗ ತಿವಾರಿ ಹೇಳಿಕೆಗೆ ಸಲ್ಲು ಸ್ಪಷ್ಟನೆ ನೀಡಿದ್ದಾರೆ.

Advertisement

ಒಂದೊಳ್ಳೆ ಸಿನೆಮಾ ಮಾಡಿದಾಗ ಜನರು ಕುಟುಂಬ ಸಮೇತ ಬಂದು ನೋಡುತ್ತಾರೆ. ಈ ವೇಳೆ ನಮ್ಮ ನಟಿಯರ ಬಟ್ಟೆ ಅವರಿಗೆ ಮುಜುಗರ ತರಬಾರದು. ಅಲ್ಲದೇ ಹೆಣ್ಣುಮಕ್ಕಳನ್ನು ಈಗ ಗಂಡು ಮಕ್ಕಳು ನೋಡುವ ದೃಷ್ಟಿ ಕೂಡ ಬದಲಾಗಿಬಿಟ್ಟಿದೆ. ಹೆಣ್ಣು ಮಕ್ಕಳ ದೇಹ ಅತ್ಯಮೂಲ್ಯ ಹೀಗಾಗಿ ಮೈ ತುಂಬ ಬಟ್ಟೆ ಸೂಕ್ತ ಎಂಬುದು ನನ್ನ ನೀತಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next