Advertisement

ನಿವೇಶನಗಳ ನಕಲಿ ದಾಖಲೆ ಸೃಷ್ಟಿ:ಕ್ರಮಕ್ಕೆ ಆಗ್ರಹಿಸಿ ಸಚಿವರಿಗೆ ಮನವಿ

12:19 PM Sep 23, 2018 | Team Udayavani |

ಯಾದಗಿರಿ: ನಗರದ ಲಕ್ಷ್ಮೀನಗರ ಬಡಾವಣೆಯ ಕೆಲ ನಿವೇಶನಗಳ ನಕಲಿ ದಾಖಲಿ ಸೃಷ್ಟಿಸಿ ಮತ್ತೂಬ್ಬರ ಹೆಸರಿಗೆ ವರ್ಗಾಹಿಸಿ ಮಾರಾಟ ಮಾಡಲಾಗಿದ್ದು, ತನಿಖೆ ಚುರುಕುಗೊಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ
ನೀಡುವಂತೆ ನಿವೇಶನ ಮೂಲ ನಿವಾಸಿಗಳು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ
ಅವರಿಗೆ ಮನವಿ ಸಲ್ಲಿಸಿದರು.

Advertisement

ಉದ್ಯಮಿ ಮಲ್ಲಿಕಾರ್ಜುನ ಶಿರಗೋಳ ಪ್ರಕರಣದ ಕುರಿತು ವಿವರಿಸಿ, ಲಕ್ಷ್ಮೀ ನಗರದ ಸರ್ವೇ 384/1ರಲ್ಲಿ ಸುಮಾರು 20 ನಿವೇಶನಗಳನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಬೇರೆ ಅವರಿಗೆ ಮಾರಾಟ ಮಾಡಲಾದ ಬಗ್ಗೆ ಈಚೆಗೆ ಬೆಳಕಿಗೆ ಬಂದಿದೆ. ನಿವೇಶನದ ಮೂಲ ಖರೀದಿದಾರರು ನಾವಾಗಿದ್ದು, ನಮ್ಮ ಗಮನಕ್ಕೆ ಬಾರದೆ ನಕಲಿ ದಾಖಲೆ ಸೃಷ್ಟಿಸಿದ ಕೆಲವರು ಬೇರೆಯವರಿಗೆ ಖಾಲಿ ನಿವೇಶನಗಳನ್ನು ತೋರಿಸಿ, ಲಕ್ಷಾಂತರ ರೂ. ಬೆಲೆ ಬಾಳುವ ನಿವೇಶನಗಳನ್ನು ಮಾರಾಟ ಮಾಡಿಕೊಂಡಿರುತ್ತಾರೆ ಎಂದು ಸಚಿವರ ಗಮನಕ್ಕೆ ತಂದರು.

ಲಕ್ಷ್ಮೀ ನಗರದ ಸರ್ವೇ ನಂ. 384/1ರ ಜಮೀನಿನ ಮಾಲೀಕ ಆದೆಪ್ಪ ಭೀಮಪ್ಪ ಎಂಬುವವರು 1998ರಲ್ಲಿ ಮೃತಪಟ್ಟಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾದಗಿರಿ ತಾಲೂಕಿನ ಸಾವೂರು ಗ್ರಾಮದ ನಿವಾಸಿ ಭಾಸ್ಕರ್‌ ಭೀಮರಾಯ ಎಂಬಾತನನ್ನು ಕೆಲವರು ಜಮೀನಿನ ಮಾಲೀಕ ಆದೆಪ್ಪ ಎಂದು ಪರಿಚಯಿಸಿ, ಆತನಿಂದ ನಿವೇಶನ ಮಾರಾಟ ಮಾಡಿ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ವಿಳಂಬವಾಗಿ ನಡೆಯುತ್ತಿದೆ. ಅಲ್ಲದೆ ನಿವೇಶನ ಮೂಲ ಖರೀದಾರರು ನಗರಸಭೆಯಿಂದ ಕಟ್ಟಡ ಪರವಾನಗಿ ಪಡೆದು ಲಕ್ಷ್ಮೀ ನಗರ
ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದ್ದು, ತೆರಿಗೆ ಸಹ ಭರಿಸುತ್ತಿ¨ªೇವೆ ಎಂದು ವಿವರಿಸಿದರು. ಈ
ವೇಳೆ ಶರಣಪ್ಪ ಬೆನಕನಳ್ಳಿ, ಸುರೇಶ ಬೊಮ್ಮನ, ಚಂದಪ್ಪ ಚಿಕ್ಕಮೇಟಿ, ಬಂದಪ್ಪ, ಮಲ್ಲು ಭಾವಿಕಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next