Advertisement

ICGಗೂ ಶಾಶ್ವತ ಆಯೋಗ ಕಲ್ಪಿಸಿ: ಸುಪ್ರೀಂ ಕೋರ್ಟ್‌

12:28 AM Feb 27, 2024 | Team Udayavani |

ಹೊಸದಿಲ್ಲಿ: ಭಾರತೀಯ ಕರಾವಳಿ ಭದ್ರತಾ ಪಡೆಯ (ಐಸಿಜಿ) ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗದಿಂದ ಹೊರಗಿಡುವಂತಿಲ್ಲ! ಮಹಿಳಾ ಅಧಿಕಾರಿಗಳಿಗೆ ಕೇಂದ್ರ ಸರಕಾರ ಶಾಶ್ವತ ಆಯೋಗ ಕಲ್ಪಿಸದಿದ್ದರೆ ನ್ಯಾಯಾಲಯವೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರವನ್ನು ಎಚ್ಚರಿಸಿದೆ.

Advertisement

ಐಸಿಜಿ ಮಹಿಳಾ ಅಧಿಕಾರಿಯೊಬ್ಬರು ಕಿರು ಸೇವಾ ಆಯೋಗದ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಡಿ.ವೈ. ಚಂದ್ರಚೂಡ್‌ ಅವರ ನ್ಯಾಯಪೀಠ ಆಲಿಸಿದೆ. ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್‌ವೆಂಕಟರ ಮಣಿ, ನೌಕಾಪಡೆ, ವಾಯುಪಡೆಗಿಂತ ಕರಾವಳಿ ಭದ್ರತಾಪಡೆ ಕಾರ್ಯಾಚರಣೆ ಭಿನ್ನವಾಗಿದೆ ಎಂಬ ಕಾರಣ ನೀಡಿದರು. ಇದನ್ನು ತಳ್ಳಿ ಹಾಕಿದ ನ್ಯಾಯಪೀಠ ಕಾರ್ಯವೈಖರಿ, ಹೋಲಿಕೆಗಳ ಕಾರಣ ನೀಡಿ ಮಹಿಳೆಯರನ್ನು ಆಯೋಗ ದಿಂದ ಶಾಶ್ವತ ಹೊರಗಿಡುವಂತಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next