Advertisement

ಶಿಕ್ಷಕರ ನೇಮಕಾತಿ ನಿಯಮ ರಚಿಸಿ ಅಧಿಸೂಚನೆ

12:10 PM Aug 09, 2017 | |

ಬೆಂಗಳೂರು: ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಗಣಿತ, ವಿಜ್ಞಾನ ಹಾಗೂ ಭಾಷಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.  ಪ್ರಾಥಮಿಕ ಶಾಲೆ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ-2017ರ ಪ್ರಕಾರ
ಕಿರಿಯ ಪ್ರಾಥಮಿಕ ಶಾಲೆಗೆ (1ರಿಂದ 5ನೇ ತರಗತಿ) ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗುವುದು.

Advertisement

ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ಆಯ್ಕೆ ಮಾಡಲಾಗುವುದು. ಶೇ.50 ಅಂಕದೊಂದಿಗೆ ಪಿಯುಸಿ ಮತ್ತು ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ ಅಥವಾ ಶೇ.50ರಷ್ಟು ಅಂಕದೊಂದಿಗೆ ಪಿಯುಸಿ ಮತ್ತು ನಾಲ್ಕು ವರ್ಷದ ಪ್ರಾಥಮಿಕ ಶಿಕ್ಷಣ ಪದವಿ ಕೋರ್ಸ್‌ ಪೂರೈಸಿದವರು ಅರ್ಹರು. ಭಾಷಾ ವಿಷಯದ ಶಿಕ್ಷಕರ ಆಯ್ಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಭಾಷಾ ವಿಷಯದಲ್ಲಿ ಶೇ.50 ಅಂಕ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮೆರಿಟ್‌ ಆಧಾರದಲ್ಲಿ ಆಯ್ಕೆ ಪಟ್ಟಿ, ಮೀಸಲಾತಿ ಕೋಟಾದಡಿ ಸೀಟುಗಳ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. 

ಪ್ರಾಥಮಿಕ ಶಾಲೆಗೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (6ರಿಂದ 8ನೇ ತರಗತಿ)ಗೆ ಶಿಕ್ಷಕರನ್ನು, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳ ಲಾಗುತ್ತದೆ. ಶೇ.50ರಷ್ಟು ಅಂಕದೊಂದಿಗೆ ಪದವಿ ಶಿಕ್ಷಣ ಹಾಗೂ ಎರಡು ವರ್ಷದ ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ ಕೋರ್ಸ್‌
ಪೂರೈಸಿದ ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಇನ್‌ ಸರ್ವೀಸ್‌ ನೇಮಕಾತಿ ಹಾಗೂ ಎರಡು ವಿಭಾಗಗಳ ಶಿಕ್ಷಕರ ವೇತನ ಶ್ರೇಣಿಯ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next