Advertisement
ನಗರದ ಬಸವ ಮಹಾಮನೆ ಸಂಸ್ಥೆಯ ನೀಲಾಂಬಿಕಾ ಬಸವಯೋಗ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಷಟ್‌ಸ್ಥಳ ಶಿವಯೋಗ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿವಯೋಗ ಒಂದೇ ಇದೆ. ಹೇಳುವ ರೀತಿಯೂ ಒಂದೇ ಇದೆ. ಈ ಬಗ್ಗೆ ಎಲ್ಲ ಮಠಾಧಿಧೀಶರು ಒಂದೆಡೆ ಕುಳಿತು ಚರ್ಚಿಸಿ ಪಠ್ಯಪುಸ್ತಕ (ಮಾರ್ಗಸೂಚಿ ಗ್ರಂಥ) ಸಿದ್ಧಪಡಿಸಬೇಕು. ಇದರಿಂದ ಶಿವಯೋಗ ಮಾಡುವವರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಪೂಜೆ ಸಹಕಾರಿಯಾಗಿವೆ. ಆರೋಗ್ಯವಾಗಿ ಬದುಕಬೇಕಾದರೆ ಯೋಗ ಬೇಕು ಎಂದರು. ಒತ್ತಡದ ಬದುಕು, ಆಧುನಿಕ ಜೀವನ ಶೈಲಿಯಿಂದಾಗಿ ಬರುವ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಸೇರಿ ಇತರ ರೋಗಳಿಂದ ಮುಕ್ತರಾಗಲು ಯೋಗ ಸಹಕಾರಿಯಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಶಿವಯೋಗ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಶಿಬಿರದ ಲಾಭ ಪಡೆಯಬೇಕು. ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆ-ನುಡಿ ಒಂದಾಗಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದರು.
Related Articles
ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷ, ಶಿಬಿರದ ರೂವಾರಿ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಶಿವಯೋಗ ಸಂದೇಶ ನೀಡಿದರು.
Advertisement
ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಆಣದೂರನ ಪೂಜ್ಯ ಶ್ರೀ ಭಂತೆ ವರಜ್ಯೋತಿ, ವಿಧಾಪರಿಷತ್ ಸದಸ್ಯ ವಿಜಯಸಿಂಗ್, ರಾಜ್ಯ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿದರು.
ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ| ಎಚ್.ಸಿ. ಮಹಾದೇವಪ್ಪ,ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಮುಖಂಡ ಬಾಬು ಹೊನ್ನಾನಾಯಕ, ರಮೇಶ ಡಾಕುಳಗಿ, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಶಿಬಿರ ಸಂಚಾಲಕ ಶ್ರೀಕಾಂತ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ವಾತಡೆ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ವಾತಡೆ, ಸಂಜು ಗಾಯಕವಾಡ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಆನಂದ ದೇವಪ್ಪ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಬಸವರಾಜ ಧನ್ನೂರು ಪ್ರಾಸ್ತಾವಿಕ ಮಾತನಾಡಿದರು. ಮಂಗಲಾ ಭಾಗವತ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ ವಂದಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ, ಬಸವ ಟಿ.ವಿ. ಮುಖ್ಯಸ್ಥ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ಬಸವ ತತ್ವ ಆಧಾರಿತ, ಶರಣರ ವಚನ ಆಧಾರಿತ ಶಿವಯೋಗ ಶಿಬಿರ ನಡೆಯಲಿದ್ದು, ಶಿಬಿರಾರ್ಥಿಗಳು ಇದರ ಉಪಯೋಗ ಪಡೆದು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಶ್ರೀ ಸಿದ್ಧರಾಮ ಬೆಲ್ದಾಳ ಶರಣರು