Advertisement

Hosapete: ಕ್ರೇಜಿ ಸ್ಟಾರ್ ರವಿಚಂದ್ರನ್ ಭೇಟಿ

12:11 PM Aug 06, 2023 | Team Udayavani |

ಹೊಸಪೇಟೆ: ಕ್ರೇಜಿ ಸ್ಟಾರ್ ರವಿಚಂದ್ರನ್ ಆ.6ರ ಭಾನುವಾರ ನಗರಕ್ಕೆ ಭೇಟಿ ನೀಡಿದರು.

Advertisement

ನಗರದ ಕಾಲೇಜ್ ರಸ್ತೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ  ಹೊಟೇಲ್ ಗೆ ಚಾಲನೆ ನೀಡಿದರು.

ರವಿಚಂದ್ರನ್ ಆಗಮಿಸುವ ಸುದ್ದಿ ತಿಳಿಯುತ್ತಲೆ ಅವರು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದು, ಕ್ರೇನ್ ಮೂಲಕ ಭಾರಿ ಗಾತ್ರದ ಹೂ ಮಾಲೆ ಹಾಕಿ, ಸ್ವಾಗತಿಸಿ, ಅಭಿಮಾನ‌ ಮೆರೆದರು ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕ್ರೇಜಿ ಸ್ಟಾರ್, ಕ್ರೇಜಿ ಸ್ಟಾರ್ ಎಂದು ಕೂಗುತ್ತಾ ನೆರೆದಿದ್ದ ಅಬಿಮಾನಿಗಳತ್ತ ರವಿಚಂದ್ರನ್ ಕೈ ಬೀಸಿದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಶಾಸಕ ಗವಿಯಪ್ಪ, ಸಂಡೂರು ಶಾಸಕ ತುಕಾರಾಂ ಇನ್ನಿತರರಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next