Advertisement

ಥಾಣೆಯ 4 ಅಂತಸ್ತಿನ ಕಟ್ಟಡದಲ್ಲಿ ಬಿರುಕು: 300 ಮಂದಿ ತೆರವು

11:45 AM Oct 09, 2018 | udayavani editorial |

ಥಾಣೆ, ಮಹಾರಾಷ್ಟ್ರ : ಇಲ್ಲಿನ ನಾಲ್ಕಂತಸ್ತಿನ ಕಟ್ಟಡದಲ್ಲಿ ಆಳವಾದ ಬಿರುಕು ಕಂಡು ಬಂದಿರುವನ್ನು ಅನುಸರಿಸಿ ಕಟ್ಟಡದೊಳಗೆ ವಾಸವಾಗಿದ್ದ  ಸುಮಾರು 300 ಮಂದಿಯನ್ನು ತೆರವುಗೊಳಿಸಲಾಯಿತು ಎಂದು ಪೌರಾಡಳಿತೆಯ ಅಧಿಕಾರಿಗಳು ಇಂದು ಮಂಗಳವಾರ ತಿಳಿಸಿದ್ದಾರೆ. 

Advertisement

ಉಠಾಲ್‌ಸಾರ್‌ ಪ್ರದೇಶದಲ್ಲಿನ ವಸತಿ ಕಟ್ಟಡದ ಎರಡನೇ ಮಹಡಿಯಲ್ಲಿನ ಪಿಲ್ಲರ್‌ನಲ್ಲಿ ಬಿರುಕು ಕಂಡುಬಂದಿರುವ ಬಗ್ಗೆ ಸೋಮವಾರ ತಡ ರಾತ್ರಿ ಮುನಿಸಿಪಲ್‌ ಕಾರ್ಪೊರೇಶನ್‌ ನ ತುರ್ತು ನಿಯಂತ್ರಣ ಕೊಠಡಿಗೆ ಫೋನ್‌ ಕರೆ ಬಂದಿತ್ತು ಎಂದು ನಗರಾಡಳಿತೆಯ ಪ್ರಾದೇಶಿಕ ವಿಪತ್ತು ನಿರ್ವಹಣ ಕೊಠಡಿಯ ಮುಖ್ಯಸ್ಥರಾಗಿರುವ ಸಂತೋಷ್‌ ಕದಂ ಹೇಳಿದರು. 

ಒಡನೆಯೇ ಪೌರಾಡಳಿತೆ ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಕಟ್ಟಡದೊಳಗೆ ವಾಸವಿದ್ದ ಸುಮಾರು 57 ಕುಟುಂಬಗಳಿಗೆ ಸೇರಿದ 300 ಮಂದಿಯನ್ನು ತೆರವುಗೊಳಿಸಲಾಯಿತು. ಈ ಕಟ್ಟಡವು 35 ವರ್ಷಗಳಷ್ಟು ಹಳೆಯದೆಂದು ಗೊತ್ತಾಗಿದೆ.

ಕಟ್ಟಡವನ್ನು ಈಗ ಸೀಲ್‌ ಮಾಡಲಾಗಿದ್ದು ಅದರಿಂದ ತೆರವುಗೊಳಿಸಲ್ಪಟ್ಟಿರುವ ಜನರನ್ನು ತಾತ್ಕಾಲಿಕವಾಗಿ ನಗರದ  ಭಯಾಂದರ್‌ ಪಾಡ ಪ್ರದೇಶದಲ್ಲಿನ ಖಾಲಿ ವಸದಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕದಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next