Advertisement
ಅಲ್ಲಿಯೇ ಮುಂದುವರಿಯುವುದಾದರೆ ಹೇಗೆ…? ಬಾಡಿಗೆ, ಅಡ್ವಾನ್ಸ್‌ಗಳ ಮಾತು ಮೊದಲಾಯಿತು. ಅವರು ಬಾಡಿಗೆಯ ಬಗ್ಗೆ ಒಲವು ಹೊಂದಿದ್ದರೆ, ನನ್ನದು ಲೀಸಿಗೆ ಆದೀತೆನ್ನುವ ನಿಲುವು. ಅದೇನೋ…! ನನ್ನ ಅವರ ಮಧ್ಯೆ ಕೊಂಚ ಸಲಿಗೆಯೂ ಬೆಳೆದಿತ್ತು. ಹೀಗಾಗಿ ಗಂಭೀರವಾಗಬಹುದಾಗಿದ್ದ ಮಾತನ್ನು ಕೊಂಚ ಹಾಸ್ಯದ ದಾಟಿಗೆ ಹೊರಳಿಸಿದೆ. “ಸಾರ್ ಮೊನ್ನೆ ತಾನೆ ನೀವು ಕಷ್ಟಪಟ್ಟು ಬೆಟ್ಟ ಹತ್ತಿ ದೇವರ ದರ್ಶನ ಮಾಡಿ, ಕಾಣಿಕೆ ಹಾಕಿ ಚೆನ್ನಾಗಿ ಬಾಡಿಗೆ ಬರಲಿ ಅಂತ ಕೇಳ್ಕೊಂಡು, ಆಶೀರ್ವಾದ ತಗೊಂಡ್ ಬಂದ್ರಿ! ಈಗ ನಾನು ದೇವರ ದರ್ಶನ ಮಾಡಿ, ಯಜಮಾನ್ರು ಮನೇನ ಲೀಸಿಗೆ ಕೊಡೋ ಹಂಗ್ ಮಾಡು ತಂದೆ ಅಂತ ಕೇಳ್ತೀನಿ. ಆತ ದಯಾಮಯ, ನನಗೂ- ನಿಮಗೂ ಇಬ್ಬರಿಗೂ ತಥಾಸ್ತು ಅಂತಾನೆ. ನಾವು ಯಾಕೆ ಆತನ ಏಕಾಂತಕ್ಕೆ ಭಂಗ ತರೋಣ? ನಾವು ಇಲ್ಲೇ ಹೇಗೋ ಹೊಂದಿಕೊಂಡು ಹೋಗಿಬಿಟ್ಟರೆ ಒಳ್ಳೆಯದಲ್ವಾ?’ ಅಂದೆ. ಓನರ್ ಮುಖದಲ್ಲಿ ನಗೆ ಬಿರಿಯಿತು. ಅವರು ಆ…! ಅಂತ ಉದ್ಗರಿಸಿದವರೇ… “ನಿಮೊªಳ್ಳೇ ತಮಾಷಿ!’ ಅಂತ ನಗುವಿನ ವಾಲ್ಯೂಂ ಏರಿಸಿದವರೇ… ಒಂದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮುದ್ರೆಯಲ್ಲಿ ಕುಳಿತರು. ಘನ ಗಂಭೀರತೆಯ ನೀರವ ವಾತಾವರಣ.
Advertisement
ಜೋಕು ಮಾಡಿ ಓನರನ್ನು ಒಪ್ಪಿಸಿದ್ದೆ!
04:31 PM Sep 16, 2017 | |
Advertisement
Udayavani is now on Telegram. Click here to join our channel and stay updated with the latest news.