Advertisement
ಶಾಸಕರ ರಾಜೀನಾಮೆ ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಬುಧವಾರ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕರ್ನಾಟಕಕ್ಕೆ ಬಹಳ ಅತ್ಯುತ್ತಮ ಸಂಸದೀಯ ಚರಿತ್ರೆ ಇದೆ. ಬೇರೆ ರಾಜ್ಯಗಳಲ್ಲಿ ಈ ರೀತಿಯ ರಾಜಕೀಯ ಬೆಳವಣಿಗೆಗಳು ನಡೆದರೂ ರಾಜ್ಯದಲ್ಲಿ ಎಂದೂ ಈ ರೀತಿ ರಾಜಕಿಯ ಬೆಳವಣಿಗೆಗಳು ನಡೆದಿಲ್ಲ. ಈಗ ಶಾಸಕರ ರಾಜೀನಾಮೆ ಪ್ರಹಸನ ರಾಜ್ಯದ ಆರು ಕೋಟಿ ಜನ ತಲೆತಗ್ಗಿಸುವಂತಾಗಿದೆ ಎಂದರು.
Related Articles
Advertisement
ಪಲಾಯನ ಸಲ್ಲದು: ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದ್ದ ಶಾಸಕರು ಈಗ ಕಳ್ಳರಂತೆ ಬಚ್ಚಿಟ್ಟುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಶಾಸನ ಸಭೆಗಳಿಗೆ ಹೋಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಸುಪ್ರೀಕೋರ್ಟ್ ಹೇಳಿದೆ. ಆದರೆ ಮತದಾರರು ಶಾಸಕರನ್ನು ಆರಿಸಿರುವುದು ಶಾಸನ ಸಭೆಗಳಿಗೆ ಹೊರತು, ಬಾಂಬೆಗೆ ಹೋಗಲು ಅಲ್ಲ ಎಂದರು.
ಶಾಸಕರಿಗೆ ಏನೇ ಸಮಸ್ಯೆ ಇದ್ದರೂ ಶಾಸನ ಸಭೆಗಳಲ್ಲಿ ಮಾತನಾಡುವ ಹಕ್ಕಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಅಥವಾ ವಿಶ್ವಾಸ ಮತ ಮಂಡನೆಗೆ ಅವಕಾಶ ಇದೆ. ಎಲ್ಲ ಅಧಿಕಾರ, ಶಕ್ತಿ ಇದ್ದರೂ ಕೂಡ ರಾಜ್ಯದ ಹಿತಾಸಕ್ತಿಯನ್ನು ಮರೆತು ಪಲಾನಯನ ಮಾಡಿದರೆ ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಹಾಗೂ ಪಿತೂರಿ ಅಡಗಿದೆಯೆಂದು ಟೀಕಿಸಿದರು.
ಬಿಜೆಪಿ ವಿರುದ್ಧ ಟೀಕಾಪ್ರಹಾರ: ದೇಶದಲ್ಲಿ ಮೋದಿ ಸರ್ಕಾರ ಎರಡನೇ ಸಲ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಏಕಪಕ್ಷದ ಸರ್ವಾಧಿಕಾರವನ್ನು ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದರ ಮೊದಲ ಪ್ರಯತ್ನವನ್ನು ಕರ್ನಾಟದಿಂದ ಆರಂಭಿಸಲಾಗಿದೆ. ಹಿಂಬಾಗಲಿನಿಂದ ಬಿಜೆಪಿ ಅಧಿಕಾರ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಮೊನ್ನೆ ತಾನೆ ಗೋವಾದಲ್ಲಿ 15 ಮಂದಿ ಶಾಸಕರನ್ನು ಪಕ್ಷಾಂತರ ಮಾಡಿ ಅಧಿಕಾರ ಕೊಟ್ಟಿದ್ದಾರೆ ಎಂದರು.
ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಅಧಿಕಾರದಲ್ಲಿರುವ ಮದ್ಯಪ್ರದೇಶ, ರಾಜಸ್ಥಾನ, ಪಶ್ಚಿಮಬಂಗಾಲದಲ್ಲಿ ಆಡಳಿತರೂಢ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರವನ್ನು ಅಸ್ವಿತ್ವಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ದೇಶದ ಪ್ರಜಾತಂತ್ರದ ವ್ಯವಸ್ಥೆಗೆ ದೊಡ್ಡ ಅಪಾಯ ಎಂದು ಜಿ.ವಿ.ಶ್ರೀರಾಮರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಇತ್ತೀಚೆಗೆ ಪ್ರಧಾನಿ ಮೋದಿಯವರೇ ಪಶ್ಚಿಮ ಬಂಗಾಳದ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ. ಪ್ರಧಾನಿಯೊಬ್ಬರು ಪಕ್ಷಾಂತರ ಮಾಡಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆಂದರೆ ದೇಶದ ಪ್ರಜಾಪ್ರಭುತ್ವಕ್ಕೆ ಎಷ್ಟು ಗಂಡಾಂತರ ಅಡಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ಸದಸ್ಯರಾದ ಚೆನ್ನರಾಯಪ್ಪ, ಎಚ್.ಪಿ.ಲಕ್ಷ್ಮೀನಾರಾಯಣ್, ಮಂಜುನಾಥರೆಡ್ಡಿ, ಬಿ.ಎನ್.ಮುನಿಕೃಷ್ಣಪ್ಪ, ರವಿಚಂದ್ರರರೆಡ್ಡಿ, ಆರ್.ಎನ್.ರಾಜು. ಜೈನಾಭಿ, ಸುಬ್ಬರಾಯಪ್ಪ, ಕೃಷ್ಣಪ್ಪ, ವೆಂಕಟೇಶಪ್ಪ, ಮಧು, ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.
ಪಕ್ಷಾಂತರದಿಂದ ರಾಜಕೀಯ ಪಿತೂರಿ: ದೇಶದಲ್ಲಿ ಎಲ್ಲೂ ಕೂಡ ವಿರೋಧ ಪಕ್ಷಗಳು ಅಧಿಕಾರ ನಡೆಸುವ ಸರ್ಕಾರ ಇರಬಾರದು. ನಮನೆ ಎಲ್ಲೂ ವಿರೋಧ ಇರಬಾರದೆಂದು ಹೇಳಿ ಬಿಜೆಪಿ ಪಕ್ಷ ಪಕ್ಷಾಂತರದ ಮೂಲಕ ರಾಜಕೀಯ ಪಿತೂರಿ ನಡೆಸಿ ಏಕಪಕ್ಷೀಯವಾದ ಸರ್ವಾಧಿಕಾರವನ್ನು ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ.
ಅದರ ಪ್ರತಿಫಲ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿ. ಎಂತಹವರಿಗೆ ನಾವು ಮತ ಹಾಕಿ ಶಾಸನ ಸಭೆಗಳಿಗೆ ಆರಿಸಿ ಕಳುಹಿಸಿದ್ದೇವೆಂಬದನ್ನು ರಾಜ್ಯದ ಜನತೆ ಅಲೋಚಿಸಬೇಕಿದೆ. ಶಾಸಕರಿಗೆ ವಿಪ್ ಜಾರಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದರೆ ಆದರೆ ವಿಪ್ ಜಾರಿ ಮಾಡುವ ಅಧಿಕಾರ ರಾಜಕೀಯ ಪಕ್ಷಗಳಿಗೆ ಇದೆ ಎಂದು ಸಿಪಿಎಂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.