Advertisement

ಕೇಂದ್ರದ ವಿರುದ್ಧ ಸಿಪಿಎಂ ಪ್ರತಿಭಟನೆ

01:57 PM Aug 30, 2020 | Suhan S |

ಹಾಸನ: ಕೋವಿಡ್ ದಿಂದ ಸಂಕಷ್ಟಕ್ಕೀಡಾಗುತ್ತಿರುವ ಜನವರ್ಗವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಮತ್ತು ತುರ್ತಾಗಿ ಜನರ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಕಾರ್ಯ ಕರ್ತರು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್‌ ಮಾತ ನಾಡಿ, ದೇಶದಲ್ಲಿ ಕೋವಿಡ್ ಹಾವಳಿ ತೀವ್ರವಾಗು ತ್ಲೇ ಇದೆ. ಕೋವಿಡ್ ಸೋಂಕು ನಿಯಂತ್ರಣ ಮಾಡಲು ಲಾಕ್‌ಡೌನ್‌ ಮಾಡಲಾಗಿತ್ತು. ಇದರಿಂದ ದೇಶದ ಆರ್ಥಿಕತೆಗೆ ಹಾನಿಯಾಯಿತೇ ವಿನಃ ಕೊರೊನಾ ನಿಯಂತ್ರಣಕ್ಕೆ ಬರಲಿಲ್ಲ. ಕೇಂದ್ರ ಸರ್ಕಾರದ ವೈಫ‌ಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ದೂರಿದರು.

ಲಾಕ್‌ಡೌನ್‌ ದೇಶದ ಬಹುಪಾಲು ಜನರ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನರು, ಮಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರ ಮೇಲೆ ಹೇಳ ತೀರದ ಸಂಕಷ್ಟಗಳನ್ನು ಹೇರಿತು. ಕೇಂದ್ರ ಬಿಜೆಪಿ ಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ. ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಮತ್ತು ಆಹಾರ ಧಾನ್ಯಗಳನ್ನು ಉಚಿತವಾಗಿ ತರಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವುದನ್ನು ನಿರಾಕರಿಸಿದೆ. ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫ‌ಲವಾದ ಮೋದಿ ಸರ್ಕಾರ ಈಗ ಲಾಕ್‌ಡೌನ್‌ ತೆರವು ಮಾಡುತ್ತಾ ತಾನು ಉಂಟು ಮಾಡಿದ ಸಮಸ್ಯೆಯನ್ನು ಎದುರಿಸುವ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ಆದರೆ ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ರಾಜ್ಯಗಳಿಗೆ ಸಹಾಯ ಮಾಡಲು ಮುಂದಾಗುತ್ತಿಲ್ಲವೆಂದು ಆರೋಪಿಸಿದರು. ಸಿಪಿಎಂ ಹಾಸನ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಚ್‌.ಆರ್‌.ನವೀನ್‌ಕುಮಾರ್‌ ಮಾತನಾಡಿ, ದೇಶದ ಜನರು ಹಸಿವಿನಿಂದ ಕಂಗೆಟ್ಟು ಕುಳಿತ್ತಿದ್ದಾರೆ. ದೇಶದ ಪ್ರಜೆಗಳಿಗೂ ಆಹಾರ ನೀಡುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನಿರ್ವಹಿಸುವಲ್ಲಿ ವಿಫ‌ಲವಾಗಿದೆ ಪಕ್ಷದ ಮುಖಂಡರಾದ ಎಂ.ಜಿ.ಪೃಥ್ವಿ, ರಾಜು ಸಿಗರನಹಳ್ಳಿ, ವಾಸು, ಜಿ.ಪಿ.ಸತ್ಯನಾರಾಯಣ, ಅರವಿಂದ, ವಸಂತಕುಮಾರ್‌, ಮೋಹನ್‌, ಪ್ರಸನ್ನಕುಮಾರ ಚಿಕ್ಕಕಣಗಾಲು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next