ಕೇರಳ : ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದ ದೇವಳದ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಎಂ) ಸ್ಥಳೀಯ ನಾಯಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತರನ್ನು ಪಿ.ವಿ.ಸತ್ಯನಾಥನ್ ಎಂದು ಗುರುತಿಸಲಾಗಿದೆ.
ಗುರುವಾರ ಕೊಯಿಲಾಂಡಿಯ ಚೆರಿಯಪುರಂ ದೇವಸ್ಥಾನದಲ್ಲಿ ಉತ್ಸವ ನಡೆಯುತಿತ್ತು ಇದೇ ವೇಳೆ ಅಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸತ್ಯನಾಥನ್ ಭಾಗವಹಿಸಿದ್ದರು. ಈ ವೇಳೆ ಬಂದ ದುಷ್ಕರ್ಮಿಗಳು ಸತ್ಯನಾಥನ್ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾರೆ ಪರಿಣಾಮ ಅವರ ಬೆನ್ನು ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಈ ವೇಳೆ ಅಲ್ಲಿದ್ದವರು ಕೂಡಲೇ ಸತ್ಯನಾಥನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಆರೋಪಿಯ ಬಂಧನ :
ಇನ್ನು ಘಟನೆಗೆ ಸಂಬಂಧಿಸಿ ಪೆರುವತ್ತೂರು ಪೈಲಾನ ಮೂಲದ ಅಭಿಲಾಷ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಆನೆಲದ ಮಾಜಿ ಶಾಖಾ ಸಮಿತಿ ಸದಸ್ಯನಾಗಿದ್ದು ಹಾಗೂ ಕೊಯಲಾಡಿ ಪುರಸಭೆಯ ಮಾಜಿ ಅಧ್ಯಕ್ಷರ ಕಾರು ಚಾಲಕನಾಗಿದ್ದ ಎನ್ನಲಾಗಿದೆ ವೈಯಕ್ತಿಕ ದ್ವೇಷವೇ ಸತ್ಯನಾಥನ್ ಮೇಲಿನ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು ತನಿಖೆ ನಡೆಯುತ್ತಿದೆ.
ಪಿ.ವಿ. ಸತ್ಯನಾಥನ್ ಅವರು ಸಿಪಿಐ (ಎಂ) ಕೊಯಿಲಾಂಡಿ ಕೇಂದ್ರ ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು, ಘಟನೆಯ ಹಿನ್ನೆಲೆಯಲ್ಲಿ ಸಿಪಿಐ (ಎಂ) ಶುಕ್ರವಾರ ಕೊಯಿಲಾಂಡಿಯಲ್ಲಿ ಬಂದ್ ಗೆ ಕರೆ ನೀಡಿದೆ.
ಇದನ್ನೂ ಓದಿ: Sandeshkhali ಗದ್ದಲದ ನಡುವೆ ಶೇಖ್ ಷಹಜಹಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ