Advertisement

ಗುಲ್ವಾಡಿ ಅಬ್ಬಿಗುಡ್ಡೆಗೆ ಸಿಪಿಎಂ ನಿಯೋಗ ಭೇಟಿ

10:14 AM May 27, 2019 | Team Udayavani |

ಕುಂದಾಪುರ: ಗುಲ್ವಾಡಿ ಗ್ರಾಮದ ಅಬ್ಬಿಗುಡ್ಡೆ ಜನರಿಗೆ ನೀರಿಗೆ ಬರ ಬಂದಿದೆ ಎಂದು ಉದಯವಾಣಿ ಪತ್ರಿಕೆ ಜೀವ ಜಲ ಕ್ಷಾಮ ಸರಣಿಯ ವರದಿಯ ಹಿನ್ನೆಲೆಯಲ್ಲಿ ಸಿಪಿಐ(ಎಂ) ನಿಯೋಗವು ಅಬ್ಬಿಗುಡ್ಡಿ ಪ್ರದೇಶದ ಕೆಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

Advertisement

2018ರಲ್ಲಿ ಸಿಪಿಐ(ಎಂ) ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್‌ ಎದುರು ಪ್ರತಿಭಟನೆ ನಡೆಸಿ ಮನವಿ ನೀಡಿ ಒತ್ತಾಯಿಸಲಾಗಿತ್ತು. ಆ ವೇಳೆಯಲ್ಲಿ ಮನವಿ ಸ್ವೀಕರಿಸಿ ಶೀಘ್ರ ಪರಿಹಾರ ಮಾಡುವುದಾಗಿ ಪ್ರತಿಭಟನಕಾರರಿಗೆ ಭರವಸೆ ನೀಡಲಾಗಿತ್ತು. ಆದರೂ ಕಾಳಜಿ ವಹಿಸದಿರುವುದು ಖಂಡನೀಯವಾಗಿದೆ. ಗ್ರಾಮ ಪಂಚಾಯತ್‌ ಈಗ ಪ್ರತಿ ಮನೆಗೂ 200 ಲೀ. ನೀರು ಟ್ಯಾಂಕರ್‌ ಮೂಲಕ ಒದಗಿಸುತ್ತಿದೆ ಎಂಬ ಮಾಹಿತಿ ಸ್ಥಳೀಯರು ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಸ್ಥಳೀಯ ಪಂಚಾಯತ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿತರು ಆಡಳಿತ ಮಾಡುತ್ತಿದ್ದು ಈ ಪಕ್ಷಗಳೇ ತಾಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌ಗಳಲ್ಲಿ ಅಧಿಕಾರ ನಡೆಸುತ್ತಿದ್ದರೂ ಗ್ರಾಮದ ಜನರು ಮಾತ್ರ ಅನುದಾನದ ಕೊರತೆಯಿಂದ ಕುಡಿಯುವ ನೀರಿಗೂ ಪರದಾಡುವಂತಾಗಿರುವುದನ್ನು ಸಿಪಿಐ(ಎಂ) ಪಕ್ಷ ಖಂಡಿಸುತ್ತದೆ.

ಕುಡಿಯುವ ನೀರಿನ ಸರಬರಾಜು ಕಾಮಗಾರಿಗೆ ಶೀಘ್ರಅನುದಾನ ನೀಡಿ ಅರ್ಧಕ್ಕೆ ನಿಂತ ಕಾಮಗಾರಿ ಕೂಡಲೇ ಆರಂಭಿಸಬೇಕು, ನೀರಿನ ಶಾಶ್ವತ ಪರಿಹಾರ ಮಾಡಬೇಕೆಂದು ಪಕ್ಷವು ಆಗ್ರಹಿಸುತ್ತದೆ. ಪಕ್ಷದ ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ಸ್ಥಳೀಯ ಶಾಖಾ ಕಾರ್ಯದರ್ಶಿ ಅಣ್ಣಪ್ಪ ಅಬ್ಬಿಗುಡ್ಡೆ ಉಪಸ್ಥಿತರಿದ್ದರು.

ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಅಬ್ಬಿಗುಡ್ಡೆ, ಉದಯನಗರ, ಮಾವಿನಕಟ್ಟೆ ಸಮಸ್ಯೆ ಕುರಿತು ಉದಯವಾಣಿ ಮೇ 4ರಂದು ವರದಿ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next