Advertisement

ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ

06:10 PM Jan 13, 2025 | Team Udayavani |

ಉದಯವಾಣಿ ಸಮಾಚಾರ
ಯಲ್ಲಾಪುರ: ತಾಲೂಕಿನ ಮದನೂರು ಗ್ರಾಪಂ ವ್ಯಾಪ್ತಿಯ ಡೋಮಗೇರಿ ಬಳಿ ಇರುವ ಜಲ ಜೀವನ್‌ ಮಿಷನ್‌ ಯೋಜನೆಯ ಓವರ್‌ ಹೆಡ್‌ ನೀರಿನ ಟ್ಯಾಂಕ್‌ನೊಳಗೆ ಹಾವೊಂದು ಸತ್ತು ಕೊಳೆತಿದ್ದು ಇದರ ಅರಿವಿಲ್ಲದೇ ಈ ನೀರು ಸೇವಿಸಿದ ಅನೇಕರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

Advertisement

ಈ ಟ್ಯಾಂಕಿನೊಳಗೆ ಹಾವು ಬಿದ್ದು ಸತ್ತು ಬಹಳ ದಿನಗಳಾಗಿತ್ತು. ಈ ಸಂಗತಿ ಅರಿವಿಗಿಲ್ಲದ ಜನ ಆ ಟ್ಯಾಂಕಿನ ನೀರನ್ನೇ ಕುಡಿಯಲು ಇನ್ನಿತರ ಕೆಲಸಕ್ಕೆ ಬಳಸಿದ್ದು ಕೆಲ ದಿನದಿಂದ ಗ್ರಾಮದಲ್ಲಿ ಹಲವರಿಗೆ ಏಕಾಏಕಿ ಆರೋಗ್ಯದ ತೊಂದರೆ ಉಂಟಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.

ಟ್ಯಾಂಕ್‌ ಒಳಗೆ ಹಾವು ಸತ್ತಿದ್ದನ್ನು ಯಾರೋ ಗಮನಿಸಿ ಸ್ಥಳೀಯ ಗ್ರಾಮ ಪಂಚಾಯತಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರಪೃತ್ತರಾದ ಪಂಚಾಯತದ ಪಿಡಿಒ ಅಣ್ಣಪ್ಪ ವಡ್ಡರ್‌, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಗಳಿಗೆ ಮಾಹಿತಿ ನೀಡಿ ದರು. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದರು.

ಎಂಟು ಜನರನ್ನು ತಾಲೂಕಾ ಆರೋಗ್ಯ ಕೇಂದ್ರಕ್ಕೂ ಅದರಲ್ಲಿ ಮೂವರನ್ನು ಒಳರೋಗಿಗಳಾಗಿ ದಾಖಲಿಸಲಾಗಿದೆ. ಉಳಿದವರನ್ನು ತಪಾಸಣೆಗೊಳ ಪಡಿಸಿ ವಾಪಸ್‌ ಮನೆಗೆ ಕಳುಹಿಸಲಾಗಿದೆ.

ಯಾವುದೇ ವಿಷಕಾರಿ ಅಂಶ ನೀರಿನಲ್ಲಿ ಇಲ್ಲ. ತೊಂದರೆಯಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ಬಳಿಕ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಶುಚಿತ್ವ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಗ್ರಾಮದ ಜನರಿಗೆ ಮಹಿತಿ ನೀಡಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ|ನರೇಂದ್ರ ಪವಾರ್‌ ತಿಳಿಸಿದ್ದಾರೆ.

Advertisement

ಗ್ರಾಮಸ್ಥರು ಮಾಹಿ ನೀಡಿದ ತಕ್ಷಣ ಪಿಡಿಒ ಮತ್ತು ಅರಣ್ಯ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಪಂದಿಸಿದ್ದಾರೆ. ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ಶುದ್ಧ ನೀರು ಪೂರೈಕೆ ಮಾಡಿದ್ದಾರೆ ಎಂದು ಗ್ರಾಮಸ್ಥ ನಾಗರಾಜ ಗೊಂದಳೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.