Advertisement

ಶಬರಿಮಲೆ ತೀರ್ಪು ಅನುಷ್ಠಾನಕ್ಕೆ ಎಲ್ಲರ ಸಹಕಾರ: ಸಿಪಿಎಂ ಮನವಿ

03:52 PM Oct 06, 2018 | udayavani editorial |

ತಿರುವನಂತಪುರ : ಎಲ್ಲ ವಯೋವರ್ಗದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟಿನ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದು ಸಿಪಿಐಎಂ ನೇತೃತ್ವದ ಕೇರಳದ ಎಲ್‌ಡಿಎಫ್ ಸರಕಾರ ಜನರನ್ನು ಕೋರಿದೆ. 

Advertisement

“ದೇಶದ ಸಂವಿಧಾನ ಇರುವುದೇ ಕೋರ್ಟ್‌ ತೀರ್ಪನ್ನು ಅನುಷ್ಠಾನಿಸುವುದಕ್ಕೆ. ಅಂತೆಯೇ ಸುಪ್ರೀಂ ಕೋರ್ಟ್‌ ತೀರ್ಪನ್ನು ಅನುಷ್ಠಾನಿಸುವ ಸಂಬಂಧ ಎಲ್ಲ ಜನರ ಬೆಂಬಲವನ್ನು ಕೋರುತ್ತಿದೆ; ಆದರೆ ಬಲವಂತ ಮಾಡುವುದಿಲ್ಲ’ ಎಂದು ಪಕ್ಷದ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಹೇಳಿದರು. 

“ಸುಪ್ರೀಂ ಕೋರ್ಟ್‌ ತೀರ್ಪಿಗೆ ಸಂಬಂಧಿಸಿ ಎಡ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ; ಸರಕಾರದ ವಿರುದ್ಧ ಸ್ಥಾಪಿತ ಹಿತಾಸಕ್ತಿಗಳನ್ನು ಎತ್ತಿ ಕಟ್ಟುವ ಯಾವುದೇ ಯತ್ನವನ್ನು ಶ್ರದ್ಧಾಳುಗಳ ನೆರವಿನಿಂದಲೇ ತಡೆಯಲಾಗುವುದು’ ಎಂದು ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next