ನವದೆಹಲಿ: ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿರುವ “ಸಮಾಜವಾದಿ” ಮತ್ತು ಜಾತ್ಯತೀತ” ಶಬ್ದಗಳನ್ನು ತೆಗೆದುಹಾಕಬೇಕೆಂದು ಕೋರಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿರುದ್ಧ ರಾಜ್ಯಸಭಾ ಸದಸ್ಯ, ಸಿಪಿಐ ಮುಖಂಡ ಬಿನೋಯ್ ವಿಸ್ವಂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:ಪರೀಕ್ಷೆ ಬರೆಯಲು ಉಕ್ಕಿ ಹರಿಯುವ ನದಿ ಈಜಿ ಬಂದ ಯುವತಿ: ವಿಡಿಯೋ ವೈರಲ್
ಜಾತ್ಯತೀತತೆ ಮತ್ತು ಸಮಾಜವಾದ ಸಂವಿಧಾನದ ಅಂತರ್ಗತ ಮತ್ತು ಮೂಲಭೂತ ಲಕ್ಷಣವಾಗಿದೆ. ಆದರೆ ಸುಬ್ರಮಣಿಯನ್ ಸ್ವಾಮಿ ಭಾರತೀಯ ಸಂವಿಧಾನದಲ್ಲಿರುವ ಜಾತ್ಯತೀತ ಮತ್ತು ಸಮಾಜವಾದ ಶಬ್ದದಿಂದ ಮುಕ್ತಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿ ಕಾನೂನು ದುರುಪಯೋಗಪಡಿಸಿಕೊಂಡಿದೆ. ಆ ನಿಟ್ಟಿನಲ್ಲಿ ಸ್ವಾಮಿ ಅರ್ಜಿಯನ್ನು ವಜಾಗೊಳಿಸಬೇಕಾಗಿದೆ. ಅಲ್ಲದೇ ಇದು ಧರ್ಮದ ಹೆಸರಿನಲ್ಲಿ ರಾಜಕೀಯ ಪಕ್ಷಗಳಿಗೆ ಮತ ಕೇಳಲು ಅನುಕೂಲ ಮಾಡಿಕೊಡುವ ಪ್ರಯತ್ನ ಇದಾಗಿದೆ ಎಂದು ಬಿನೋಯ್ ಆರೋಪಿಸಿದ್ದಾರೆ.
ಇದೊಂದು ಗುಪ್ತ ಅಜೆಂಡಾ ಹೊಂದಿರುವ ಅರ್ಜಿಯಾಗಿದೆ. ದೇಶದ ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದದ ಬಗ್ಗೆ ಆಳವಾಗಿ ತಿಳಿಸಲಾಗಿದೆ. ಇದೀಗ ಆ ಶಬ್ದವನ್ನೇ ತೆಗೆದು ಹಾಕಬೇಕೆಂದು ಸ್ವಾಮಿ ಅರ್ಜಿ ಸಲ್ಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿನೋಯ್ ತಿಳಿಸಿದ್ದಾರೆ.